ಮಕ್ಕಳದಿನಾಚರಣೆಯಂದು ಅನಾಥ ಮಕ್ಕಳಿಗೆ ಕೆಎಸ್‌ಟಿಡಿಸಿ ಸಫಾರಿ
ಮಕ್ಕಳದಿನಾಚರಣೆಯಂದು ಅನಾಥ ಮಕ್ಕಳಿಗೆ ಕೆಎಸ್‌ಟಿಡಿಸಿ ಸಫಾರಿ
ವಾಣಿಜ್ಯ ಸಂಸ್ಥೆಗಳ ಸಹಯೋಗದೊಂದಿಗೆ ಮಕ್ಕಳಿಗೆ ಉಡುಗೊರೆ-ಪ್ರವಾಸ
ಬೆಂಗಳೂರಿನ ವಿವಿಧ ಅನಾಥಾಶ್ರಮಗಳ ಸುಮಾರು 1000 ಮಕ್ಕಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ 1 ದಿನದ ಸಫಾರಿಗೆ ಕೊಂಡೊಯ್ಯಲು ಕೆಎಸ್‌ಟಿಡಿಸಿ ಉದ್ದೇಶಿಸಿದೆ. ಈ ಕುರಿತ ವಿವರಗಳನ್ನು ಕೆಎಸ್‌ಟಿಡಿಸಿಯ ನೂತನ ಅಧ್ಯಕ್ಷ ಹಾಜಿ ಸತ್ತಾರ್ ಸೇಟ್ ಸುದ್ದಿಗಾರರಿಗೆ ನೀಡಿದರು.
ಕೋಕಾಕೋಲ, ಏರ್‌ಟೆಲ್ ಮುಂತಾದ ವಾಣಿಜ್ಯ ಸಂಸ್ಥೆಗಳ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯ ನೆನಪನ್ನು ಮಕ್ಕಳಲ್ಲಿ ಸ್ಮರಣೀಯಗೊಳಿಸಲು ಕೆಎಸ್‌ಟಿಡಿಸಿ ಉದ್ದೇಶಿಸಿದೆ. ಕಾರ್ಪೊರೇಟ್ ಸಂಸ್ಥೆಗಳು ಮೆದು ಪಾನಿಯ, ಮಿನರಲ್ ವಾಟರ್, ಟೀ ಷರ್ಟ್ ಹಾಗೂ ಟೋಪಿಗಳನ್ನು ಮಕ್ಕಳಿಗೆ ನೀಡಲಿವೆ. ಬೆಂಗಳೂರು ಟರ್ಫ್ ಕ್ಲಬ್ ಮಕ್ಕಳಿಗೆ ತಿಂಡಿಯ ವ್ಯವಸ್ಥೆ ಮಾಡಲಿದೆ ಎಂದು ಸೇಟ್ ತಿಳಿಸಿದರು.
ಶರ್ಮ ಟ್ರಾನ್ಸ್‌ಪೋರ್ಟ್ ಹಾಗೂ ಬ್ಲೂಲೈನ್ ಟ್ರಾನ್ಸ್‌ಪೋರ್ಟ್ ಕಂಪನಿಗಳು ಸಾರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿವೆ. ಪ್ರವಾಸೋದ್ಯಮ ಸಚಿವ ಡಿ.ಬಿ.ಇನಾಂದಾರ್ ಮಕ್ಕಳ ಸಫಾರಿಗೆ ಹಸಿರು ನಿಶಾನೆ ತೋರುವರು. ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಉಡುಗೊರೆಗಳನ್ನು ವಿತರಿಸುವರು ಎಂದು ಸೇಟ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications