ತಕರಾರು-‘ಪ್ರೊ.ರಾಮದಾಸ್‌, ಜಿ.ರಾಮಕೃಷ್ಣ ವಿಚಾರವಾದಿಗಳಲ್ಲ’

ತಕರಾರು-‘ಪ್ರೊ.ರಾಮದಾಸ್‌, ಜಿ.ರಾಮಕೃಷ್ಣ ವಿಚಾರವಾದಿಗಳಲ್ಲ’
ಯಾರು ವಿಚಾರವಾದಿ, ಯಾರು ಚಿಂತಕ? ಹಾಗೆ ಬರೆದವರಾರು?

*ಬಸವರಾಜು ಬಿ.ಕೆ., ಚಿತ್ರದುರ್ಗ

ಪತ್ರಿಕೆಗಳಲ್ಲಿ ಸುದ್ದಿಯನ್ನು ಓದುವಾಗ ನನಗೆ ಆಗಾಗ ಒಂದು ಸಂದೇಹ ಮೂಡುತ್ತದೆ. ಪ್ರಮುಖ ಹೇಳಿಕೆಗಳನ್ನು ನೀಡಿದವರ ಹೆಸರಿಗಿಂತ ಮೊದಲು ವಿಚಾರವಾದಿ, ಚಿಂತಕ, ಪ್ರಗತಿಪರ ಚಿಂತಕ, ಮಾನವತಾವಾದಿ, ಬುದ್ಧಿ ಜೀವಿ ಮುಂತಾದ ವಿಶೇಷಣಗಳನ್ನು ಬಳಸುತ್ತಾರೆ. ಈ ವಿಶೇಷಣಗಳನ್ನು ಎಲ್ಲರಿಗೂ ಬಳಸುವುದಿಲ್ಲ. ಪತ್ರಕರ್ತರು ಕೆಲವೇ ಮಂದಿಗೆ ಇದನ್ನು ಬಳಸುತ್ತಾರೆ.

ನನ್ನ ಮುಖ್ಯ ಪ್ರಶ್ನೆಯೇನೆಂದರೆ ಪತ್ರಕರ್ತರು ಯಾವ ಆಧಾರ, ತಳಹದಿ ಮೇಲೆ ಈ ಬಿರುದನ್ನು ಕೊಡುತ್ತಾರೆ? ಏನು ವಿವೇಚನೆಯಿಲ್ಲದೇ ಈ ಬಿರುದನ್ನು ಯಾವನಿಗಾದರೂ ಕೊಡುವುದು ಎಷ್ಟು ಸರಿ? ವಿಚಾರವಾದಿ, ಚಿಂತಕ ಎಂದು ಕರೆಸಿಕೊಳ್ಳಲು ಏನು ಮಾಡಬೇಕು?

ಇದರಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ- ಅದೇನೆಂದರೆ ಈ ಬಿರುದುಗಳ ದುರುಪಯೋಗ. ಮೊದಲನೆಯದಾಗಿ ಅಪಾತ್ರರಿಗೆ ಈ ಬಿರುದು ನೀಡುವುದು ಎಷ್ಟು ಸರಿ?

ಹಾಗಾದರೆ, ಈ ಬಿರುದನ್ನು ಕೊಡುವವರು ಯಾರು? ಪತ್ರಕರ್ತರು ಯಾರಿಗೆ ಬೇಕಾದರೂ ಇದನ್ನು ಕೊಡುವುದೆಷ್ಟು ಸರಿ?

ಈ ಪ್ರಶ್ನೆ ನನಗೆ ಏಕಿಷ್ಟು ಗಾಢವಾಗಿ ಕಾಡುತ್ತಿದೆ ಎಂದರೆ ಕೆಲವೇ ಕೆಲವು ಜನರಿಗೆ ಈ ವಿಶೇಷಣಗಳನ್ನು ಉಲ್ಲೇಖಿಸಿಯೇ ಅವರ ಹೆಸರನ್ನು ಬರೆಯುವ ಸಂಪ್ರದಾಯ ಬೆಳೆದು ಬರುತ್ತಿದೆ. ಉದಾಹರಣೆಗೆ ಜಿ.ಕೆ.ಗೋವಿಂದ ರಾವ್‌, ಪ್ರೊ.ಕೆ. ರಾಮದಾಸ್‌, ಡಾ. ಜಿ.ರಾಮಕೃಷ್ಣ ಇತ್ಯಾದಿ. ಇವರಿಗೆ ವಿಚಾರವಾದಿ ಎಂದು ಬಿರುದು ಕೊಟ್ಟಿದ್ದು ಯಾರು? ಇವರು ಹೇಳುವ ಅಥವಾ ಪತ್ರಿಕೆಗಳಲ್ಲಿ ವರದಿಯಾಗುವ ಅನಿಸಿಕೆಗಳನ್ನು ಓದಿದರೆ ಖಂಡಿತವಾಗಿಯೂ ಅವು ವಿಚಾರವಾದಿಯಾಬ್ಬನ ಬಾಯಿಂದ ಬರುವ ಮಾತುಗಳಂತಿರುವುದಿಲ್ಲ. ಇಂಥವರಿಗೆ ವಿಚಾರವಾದಿ, ಚಿಂತಕ ಎಂದು ಬರೆದರೆ ಆ ಪದಗಳ ಬಗೆಗಿರುವ ಕಲ್ಪನೆಯೇ ಬದಲಾಗಬಹುದು. ಇನ್ನು ಮುಂದೆ ಈ ಪದ ಬಳಸುವಾಗ ವಿವೇಚನೆ ಅಗತ್ಯ.

ಬಸವರಾಜು ವಿಚಾರದ ಬಗ್ಗೆ ನಿಮಗೇನನ್ನಿಸುತ್ತೆ?

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+