ಶಿವನಸಮುದ್ರ ವಿದ್ಯುದಾಗಾರದ ಶತಮಾನೋತ್ಸವಕ್ಕೆ ರಾಷ್ಟ್ರಪತಿ
ಶಿವನಸಮುದ್ರ ವಿದ್ಯುದಾಗಾರದ ಶತಮಾನೋತ್ಸವಕ್ಕೆ ರಾಷ್ಟ್ರಪತಿ
ಡಿಸೆಂಬರ್ ತಿಂಗಳಲ್ಲಿ ಶಿವನಸಮುದ್ರದಲ್ಲಿ ಬೆಳಕಿನ ಹಬ್ಬ
ಶಿವನಸಮುದ್ರ ಜಲ ವಿದ್ಯುದಾಗಾರದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಕಲಾಂ ಒಪ್ಪಿಕೊಂಡಿದ್ದಾರೆ. ಕಲಾಂ ಅವರ ಉಪಸ್ಥಿತಿಯಿಂದಾಗಿ ವಿದ್ಯುದಾಗಾರ ರಾಷ್ಟ್ರದ ಗಮನ ಸೆಳೆಯುವಲ್ಲಿ ಸಹಾಯವಾಗುವುದು ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ತಿಳಿಸಿದ್ದಾರೆ.
1902 ರಲ್ಲಿ ಸ್ಥಾಪನೆಯಾದ ಶಿವನಸಮುದ್ರ ವಿದ್ಯುದಾಗಾರ ದೇಶದಲ್ಲಷ್ಟೇ ಅಲ್ಲದೇ, ಏಷ್ಯಾ ಖಂಡದಲ್ಲಿಯೇ ಪ್ರಥಮ ಜಲ ವಿದ್ಯುದಾಗಾರ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಕಾವೇರಿ ನದಿ ನೀರಿನಿಂದ ಉತ್ಪಾದಿಸಲಾಗುವ ವಿದ್ಯುತ್ತನ್ನು ಕೋಲಾರದ ಚಿನ್ನದ ಗಣಿಗೆ ಹಾಯಿಸುವ ಉದ್ದೇಶದಿಂದ ಬ್ರಿಟೀಷ್ ಆಡಳಿತ ಈ ಮಹತ್ವಾಕಾಂಕ್ಷೆಯ ವಿದ್ಯುದಾಗಾರವನ್ನು ರೂಪಿಸಿತ್ತು .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications