ಹೀಗೊಂದು ನಾಟಕಗಳ ರಾಜ್ಯೋತ್ಸವ

ಹೀಗೊಂದು ನಾಟಕಗಳ ರಾಜ್ಯೋತ್ಸವ
ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ ತನ್ನ 25ನೇ ರಾಜ್ಯೋತ್ಸವವನ್ನು ಅಬ್ಬರ- ಆರ್ಭಟದ ಕಾರ್ಯಕ್ರಮ, ಸವಕಲು ಭಾಷಣಗಳಿಲ್ಲದೆ ಎರಡು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಆಚರಿಸಲಿದೆ.

ಬೆಂಗಳೂರು : ನಗರದ ಅನೇಕ ಕಡೆ ರಾಜ್ಯೋತ್ಸವದ ಭರಾಟೆ. ಆಕ್ರೆಸ್ಟ್ರಾ, ಮೈಮ್‌, ಮಿಮಿಕ್ರಿ, ಬ್ರೇಕ್‌ ಡ್ಯಾನ್ಸ್‌ಗಳೇ ವೇದಿಕೆ ತುಂಬ ತುಂಬುವ ಕಾಲವಿದು. ಅದೂ ಬಿಟ್ಟರೆ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಅಥವಾ ದೊಡ್ಡರಂಗೇಗೌಡರ ಕನ್ನಡ ಭಾಷಣ. ಆದರೆ ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ ಹಾಗೂ ಟಾಟಾ ಸ್ಮಾರಕ ಕೇಂದ್ರ ರಾಜ್ಯೋತ್ಸವವನ್ನು ಎರಡು ನಾಟಕಗಳ ಪ್ರದರ್ಶನದ ಮೂಲಕ ಆಚರಿಸಲು ಸಜ್ಜಾಗಿದೆ.

ನವೆಂಬರ್‌ 12 ಹಾಗೂ 13ನೇ ತಾರೀಕು ನಗರದ ಟಾಟಾ ಇನ್ಸ್‌ಟಿಟ್ಯೂಟ್‌ (ಐಐಎಸ್‌ಸಿ) ನ ಸತೀಶ್‌ ಧಾವನ್‌ ಸಭಾಂಗಣದಲ್ಲಿ (ಸಿ.ಎಸ್‌.ಐ.ಸಿ. ಸಭಾಂಗಣ) ಎರಡು ನಾಟಕಗಳ ಪ್ರದರ್ಶನವಿದೆ. ಹುಬ್ಬಳ್ಳಿಯ ಗುರು ಸಂಸ್ಥೆ 12ನೇ ತಾರೀಕು ಸಂಜೆ 4 ಗಂಟೆಗೆ ‘ಆಲ್‌ ದಿ ಬೆಸ್ಟ್‌’ ನಾಟಕ ಪ್ರದರ್ಶಿಸಲಿದೆ. ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿರುವ ಈ ನಾಟಕವನ್ನು ‘ಯದ್ವಾ ತದ್ವಾ’ ಧಾರಾವಾಹಿ ಖ್ಯಾತಿಯ ಯಶವಂತ ಸರದೇಶಪಾಂಡೆ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಕಚಗುಳಿಯಿಡುವ ಪಾತ್ರದಲ್ಲಿ ಮಿಂಚುತ್ತಿರುವುದೂ ಅವರೇ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹಾಗೂ ಭಾರತೀಯ ವಿಜ್ಞಾನ ಮಂದಿರದ ನಿಬಂಧಕ ಡಾ. ಉದಯ್‌ ಬಾಲಕೃಷ್ಣನ್‌ ಈ ನಾಟಕವನ್ನು ಮುಖ್ಯ ಅತಿಥಿಗಳಾಗಿ ವೀಕ್ಷಿಸಲಿದ್ದಾರೆ.

ಮರುದಿನ, ನವೆಂಬರ್‌ 13ರಂದು ಸಂಜೆ 4 ಗಂಟೆಗೆ ಗೋಲ್ಡನ್‌ ಗೈಸ್‌ ತಂಡದವರಿಂದ ಅರ್ಧ ತಾಸು ನೃತ್ಯ. ನಂತರ ಅನ್ವೇಷಣಾ ತಂಡದವರಿಂದ ಜಿ.ಪಿ.ರಾಜರತ್ನಂ ವಿರಚಿತ ‘ನರಕದ ನ್ಯಾಯ’ ನಾಟಕ ಪ್ರದರ್ಶನ. ದಟ್ಸ್‌ಕನ್ನಡ ಡಾಟ್‌ ಕಾಂ ಬಳಗದ ಪ್ರಸಾದ್‌ ನಾಯಕ್‌ ಈ ನಾಟಕ ನಿರ್ದೇಶಿಸಿದ್ದಾರೆ. ಚಲನಚಿತ್ರ ನಟ ರಾಜೇಶ್‌, ಜವಹರಲಾಲ್‌ ಉನ್ನತ ಶಿಕ್ಷಣ ಅಧ್ಯಯನ ಸಂಸ್ಥೆಯ ಆಡಳಿತಾಧಿಕಾರಿ ಎ.ಎನ್‌.ಜಯಚಂದ್ರ ಹಾಗೂ ಭಾರತೀಯ ವಿಜ್ಞಾನ ಮಂದಿರದ ಉಪ ನಿಬಂಧಕ (ಕ್ಯಾಪ್ಟನ್‌) ಎಂ.ಎಸ್‌.ವೆಂಕಟೇಶ್‌ ಈ ನಾಟಕ ಕಾರ್ಯಕ್ರಮದ ಮುಖ್ಯ ಅತಿಥಿಗಳು.

ಇದು ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಬೆಳ್ಳಿ ಹಬ್ಬ. ಅಂದಹಾಗೆ, ನಾಟಕ ನೋಡಲು ಟಿಕೇಟು ಕೊಳ್ಳಬೇಕಾಗಿಲ್ಲ. ಪ್ರವೇಶ ಸಂಪೂರ್ಣ ಉಚಿತ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+