ಆಂಧ್ರದಾದ್ಯಂತ ಗುಡಿ ಕಟ್ಟಹೊರಟಿದ್ದಾರೆ ಚಂದ್ರಬಾಬುನಾಯ್ಡು
ಆಂಧ್ರದಾದ್ಯಂತ ಗುಡಿ ಕಟ್ಟಹೊರಟಿದ್ದಾರೆ ಚಂದ್ರಬಾಬುನಾಯ್ಡು
ತಿರುಪತಿ ತಿಜೋರಿ ನೆರವಿನಿಂದ 7400 ಬಾಲಾಜಿ ದೇಗುಲಗಳ ನಿರ್ಮಾಣ
ರಾಜ್ಯದಲ್ಲಿ 7400 ಬಾಲಾಜಿ ದೇವಸ್ಥಾನಗಳನ್ನು ನಿರ್ಮಿಸುವುದು ಚಂದ್ರಬಾಬುನಾಯ್ಡು ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು , ಈ ಯೋಜನೆಯನ್ನು ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ನಿಧಿಯ ನೆರವಿನಿಂದ ಅನುಷ್ಠಾನಗೊಳಿಸಲಾಗುವುದು.
ನವಂಬರ್ 15ರಂದು ಸಮಾವೇಶಗೊಳ್ಳಲಿರುವ ಟಿಟಿಡಿ ಟ್ರಸ್ಟ್ ಸಭೆ ನಾಯ್ಡು ಅವರ ಯೋಜನೆಗೆ ನಿಧಿ ಮೀಸಲಿಡುವ ಕುರಿತು ನಿರ್ಣಯ ಕೈಗೊಳ್ಳಲಿದೆ. 100 ಕೋಟಿ ರುಪಾಯಿಗಳನ್ನು ಟ್ರಸ್ಟ್ ಯೋಜನೆಗಾಗಿ ಮೀಸಲಿಡುವ ನಿರೀಕ್ಷೆಯಿದೆ.
ನಾಯ್ಡು ಅವರ ಉದ್ದೇಶಿತ ಯೋಜನೆಯ ಮುಖ್ಯಾಂಶಗಳು:
- ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಲ್ಲಿ , ಪ್ರತಿಕ್ಷೇತ್ರಕ್ಕೆ ಕನಿಷ್ಠ 25 ದೇಗುಲಗಳನ್ನು ನಿರ್ಮಿಸುವುದು.
- ನಿರ್ಮಿತ ದೇಗುಲಗಳನ್ನು ಗೀತಾ ಮಂದಿರಗಳೆಂದು ಕರೆಯುಲಾಗುವುದು.
- ಪ್ರತಿ ಮಂದಿರಕ್ಕೆ 1.5 ಲಕ್ಷ ರುಪಾಯಿ ವೆಚ್ಚ ತಗುಲಲಿದೆ.
- ನಿರ್ಮಾಣ ವೆಚ್ಚದಲ್ಲಿ ಪ್ರತಿಶತ 10ರಷ್ಟನ್ನು ದಾನಿಗಳಿಂದ (ಹಣ, ಭೂಮಿ, ಇತ್ಯಾದಿ ರೂಪದಲ್ಲಿ) ಸಂಗ್ರಹಿಸುವುದು.
- ಜಿಲ್ಲಾಧಿಕಾರಿಗಳು ಹಾಗೂ ದತ್ತಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದೇಗುಲಗಳ ನಿರ್ಮಾಣ ಕಾರ್ಯ ನಡೆಯಲಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications