ಸ್ವಾತಂತ್ರ್ಯಹೋರಾಟಗಾರ ಅನಿರುದ್ಧ ದೇಸಾಯಿಗೆ ‘ಕನ್ನಡ ಸಿರಿ’
ಸ್ವಾತಂತ್ರ್ಯಹೋರಾಟಗಾರ ಅನಿರುದ್ಧ ದೇಸಾಯಿಗೆ ‘ಕನ್ನಡ ಸಿರಿ’
ನ. 11 ರಂದು ಬೆಂಗಳೂರಲ್ಲಿ ಮಂಗಳವೇಢೆ ಶ್ರೀನಿವಾಸ ರಾಯರ 108ನೇ ಹುಟ್ಟುಹಬ್ಬ
ರಾಜಾಜಿನಗರದ ಆರ್.ಕೆ.ಹಾಲ್‌ನಲ್ಲಿ ಮಂಗಳವಾರ ಸ್ವಾತಂತ್ರ್ಯಹೋರಾಟಗಾರ ಹಾಗೂ ಏಕೀಕರಣವಾದಿಯಾಗಿದ್ದ (ನ. 11) ಮಂಗಳವೇಢೆ ಶ್ರೀನಿವಾಸ ರಾಯರ 108ನೇ ಹುಟ್ಟುಹಬ್ಬ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಅನಿರುದ್ಧ ದೇಸಾಯಿಯವರನ್ನು ಪ್ರಶಸ್ತಿಯಾಂದಿಗೆ ಸನ್ಮಾನಿಸಲಾಗುವುದು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ದೇಸಾಯಿಯವರನ್ನು ಸನ್ಮಾನಿಸಲಿದ್ದಾರೆ. ಡಾ. ಸೂರ್ಯನಾಥ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಶೋಧಕ ಡಾ. ಎಚ್.ಎಸ್.ಗೋಪಾಲ ರಾವ್ ‘ಕರ್ನಾಟಕ ಏಕೀಕರಣ ಮತ್ತು ಮಂಗಳವೇಢೆ’ ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications