‘ಕುಚ್ಚಲಕ್ಕಿ’ಗೆ ಒಲ್ಲೆ ಎನ್ನುತ್ತಿರುವ ಮಂಗಳೂರು ಮಂದಿ
‘ಕುಚ್ಚಲಕ್ಕಿ’ಗೆ ಒಲ್ಲೆ ಎನ್ನುತ್ತಿರುವ ಮಂಗಳೂರು ಮಂದಿ
ನೂಡಲ್ಸ್ , ಬೇಲ್‌ಪುರಿಗಳ ಭರಾಟೆ ಹಾಗೂ ಅಮ್ಮಂದಿರ ಸೋಮಾರಿತನದಿಂದಾಗಿ ದಿನೇದಿನೇ ಕುಂದುತ್ತಿರುವ ಕರಾವಳಿಯ ‘ಕುಚ್ಚಲಕ್ಕಿ’ ಜನಪ್ರಿಯತೆ.
ಕರಾವಳಿಯ ‘ಕುಚ್ಚಲಕ್ಕಿ’ ಅಥವಾ ‘ಕಜೆ ಅಕ್ಕಿ’ ಅಥವಾ ತುಳುವಿನಲ್ಲಿ ಹೇಳುವಂತೆ ‘ಉರ್ಪೆಲರಿ’ ಯ ಬಳಕೆ ವಿಪರೀತ ಕಡಿಮೆಯಾಗಿದೆ.
ಮಂಗಳೂರು ಆಧುನಿಕ ನಗರವಾಗಿ ದಿನೇ ದಿನೇ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಜನರ ಜೀವನಶೈಲಿಯಲ್ಲಿಯೂ ಬದಲಾವಣೆಗಳು ಕಂಡು ಬರುತ್ತಿವೆ. ಕುಚ್ಚಲಕ್ಕಿ ಬಳಕೆ ನಿಧಾನವಾಗಿ ಕಡಿಮೆಯಾಗುತ್ತಿರುವುದು ಅಕ್ಕಿ ಮಿಲ್‌ನ ಮಾಲಿಕರ ಗಮನಕ್ಕೆ ಬಂದಿದೆ.
ಉರ್ವದ ಅಕ್ಕಿ ಗಿರಣಿ ಮಾಲಿಕ ಯು. ವಿನೋದ್ ಕುಮಾರ್ ಮಲ್ಯ ಅವರು ಕುಚ್ಚಲಕ್ಕಿ ಬಳಕೆ-ಮಾರಾಟ ಕಡಿಮೆಯಾಗಿರುವುದನ್ನು ಒಪ್ಪಿಕೊಳ್ಳುತ್ತಾರೆ. ಆಧುನಿಕ ನಗರ ಜೀವನದಲ್ಲಿ ಚಪಾತಿ ತಿನ್ನುವುದು ಒಂದು ಫ್ಯಾಶನ್ ಎನಿಸಿಕೊಂಡಿದೆ. ಅಲ್ಲದೆ ನಗರದಲ್ಲಿ ಗ್ಯಾಸ್ ಒಲೆ ಮೇಲೆ ಕುಚ್ಚಲಕ್ಕಿ ಬೇಯಿಸುವುದಕ್ಕೂ ತುಂಬಾ ಸಮಯ ಬೇಕಾಗುತ್ತದೆ. ಬೆಳ್ತಿಗೆ ಅಕ್ಕಿಯಷ್ಟು ಸುಲಭವಾಗಿ ಕುಚ್ಚಲಕ್ಕಿ ಬೇಯುವುದಿಲ್ಲವಾದ್ದರಿಂದ ಕುಚ್ಚಲಕ್ಕಿಯನ್ನು ನಗರವಾಸಿಗಳು ಕೈ ಬಿಡುತ್ತಿದ್ದಾರೆ.
ಟೀವಿಯಿಂದಾಗಿಯೂ ಜೀವನ ಶೈಲಿ ಬದಲಾಗುತ್ತಿದೆ. ಈಗಿನ ಮಕ್ಕಳು ನೂಡಲ್ಸ್, ಚಾಕೊಲೇಟು, ಪಿಡ್ಝಾದಂತಹ ಹಾಳು ಮೂಳುಗಳನ್ನೇ ಮೆಚ್ಚುತ್ತಾರೆ. ಕುಚ್ಚಲಕ್ಕಿಯ ಮಹತ್ವವನ್ನು ಅವರಿಗೆ ತಿಳಿಸಿಹೇಳುವವರೂ ಇಲ್ಲದಂತಾಗಿದೆ ಎಂಬುದು ವಿನೋದ್ ಅಭಿಪ್ರಾಯ.
ಅಲ್ಲದೆ ಇತ್ತೀಚೆಗೆ ಡಯಾಬಿಟೀಸ್ ಕಾಯಿಲೆ ಸಾಮಾನ್ಯವಾಗಿ ಬಿಟ್ಟಿರುವುದರಿಂದ ಜನ ಚಪಾತಿಯ ಮೊರೆ ಹೋಗುವುದೂ ಹೆಚ್ಚಾಗಿದೆ.
ಈಗಲೂ ಕುಚ್ಚಲಕ್ಕಿ ಗಂಜಿ ಊಟವನ್ನು ಪ್ರೀತಿಸುವ ಜನರಿದ್ದಾರೆ. ಆದರೆ ಆ ಸಂಪ್ರದಾಯವನ್ನು ಮಕ್ಕಳು ಮುಂದುವರೆಸಿಕೊಂಡು ಹೋಗುವುದಿಲ್ಲ. ಗಂಜಿ ಊಟ ಬಡವರ ಆಹಾರ ಎಂಬ ತಪ್ಪು ಕಲ್ಪನೆಯೇ ಇದರ ಹಿಂದಿರುವ ಕಾರಣ. ಬದಲಿಗೆ ನೂಡಲ್ಸ್‌ನಂತಹ ಆಧುನಿಕ - ತುಟ್ಟಿ ಆಹಾರ ಮೆಲ್ಲುವುದೇ ಫ್ಯಾಶನ್ ಆಗಿದೆ.
ಟೋಸ್ಟ್ ಆಮ್ಲೆಟ್, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಮಕ್ಕಳು ಇಷ್ಟಪಡುತ್ತಾರೆ. ಸಂಜೆ ಹೊತ್ತಿಗೆ ಮಕ್ಕಳ ಪ್ರೀತ್ಯರ್ಥ ಬೇಲ್‌ಪುರಿ ಪಾನಿಪೂರಿಗಳಿವೆ. ಕಟ್ಟಕಡೆಗೆ, ರಾತ್ರಿ ಟೀವಿ ಮುಂದೆ ಕುಳಿತುಕೊಂಡು ಮಕ್ಕಳು - ದೊಡ್ಡವರು ಏನಾದರೂ ಒಂದಿಷ್ಟು ತಿಂದರಾಯ್ತು ಎಂಬ ಉಡಾಫೆಯಿಂದಲೇ ಊಟ ಮುಗಿಸುತ್ತಾರೆ ಎಂದು ಕೈಕಂಬದ ಮಂಜುನಾಥ ಅಕ್ಕಿ ಗಿರಣಿಯ ರಾಜಾರಾಂ ಸೇಮಿತ ಹೇಳುತ್ತಾರೆ.
ಇದು ಮಕ್ಕಳ ದೋಷವಲ್ಲ. ಬದಲಾಗಿ ಅವರ ಯೋಚನೆಗಳನ್ನು ರೂಪಿಸುವ ಅಮ್ಮಂದಿರೂ ಮಕ್ಕಳ ಬೇಲ್‌ಪುರಿ-ನೂಡಲ್ಸ್ ರಾಗಕ್ಕೆ ತಾಳ ಹಾಕುತ್ತಾರೆ. ದುಡಿಯುವ ಮಹಿಳೆಗೆ ಅಡುಗೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದ್ದು, ಮಕ್ಕಳು ಹೊರಗೆ ಏನನ್ನಾದರೂ ತಿಂದು ಬಂದರೆ ಸಂತೋಷಪಡುತ್ತಾರೆ. ಅಥವಾ ಐದು ನಿಮಿಷದ ಅಡುಗೆ ನ್ಯೂಡಲ್ಸ್ - ರೆಡಿಮಿಕ್ಸ್ ಪ್ಯಾಕೇಟುಗಳನ್ನು ಖರೀದಿಸಿ ಅಡುಗೆ ತ್ರಾಸವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.
ಟೀವಿ ಧಾರಾವಾಹಿಗಳಿಗೆ ಅವರ ಸಮಯವನ್ನು ಮೀಸಲಿಡುತ್ತಾರೆ. ಮಕ್ಕಳು ಹೊರಗೆ ಹೊಟ್ಟೆ ತುಂಬಿಸಿಕೊಂಡು ಬಂದರೆ ಅಡುಗೆ ಮನೆಯಲ್ಲಿ ಅಡುಗೆ ಮಾಡುವುದು ತಪ್ಪುತ್ತದೆ ಎಂಬ ಅಮ್ಮಂದಿರ ರಿಲ್ಯಾಕ್ಸಿಂಗ್ ಮನೋಭಾವದಿಂದ ಮಕ್ಕಳೂ ಬೇಲ್ ಪುರಿ ಅಂಗಡಿಯನ್ನು ನೆಚ್ಚಿಕೊಳ್ಳುವುದನ್ನು ಮುಂದುವರೆಸುತ್ತಾರೆ.
ಆದರೆ ಅಧ್ಯಯನಗಳನ್ನು ಗಮನಿಸಿದರೆ, ಕರಾವಳಿಯಲ್ಲಿ ಬೆಳ್ತಿಗೆ ಅಕ್ಕಿ ತಿನ್ನುವುದರಿಂದ ಡಯಾಬಿಟೀಸ್ ಬೇಗನೆ ಬರುತ್ತದೆ. ಕುಚ್ಚಲಕ್ಕಿಯ ತಂಪುಗುಣ ಕರಾವಳಿಯ ಹವೆಗೆ ಚೆನ್ನಾಗಿ ಒಗ್ಗಿಕೊಳ್ಳುತ್ತದೆ. ಅದರಲ್ಲಿ ಕೊಲೆಸ್ಟರಾಲ್ ಅಂಶವೂ ತುಂಬಾ ಕಡಿಮೆ. ಕುಚ್ಚಲಕ್ಕಿಯ ಕೈಬಿಟ್ಟು, ಡಯಾಬಿಟೀಸ್ ಬರಿಸಿಕೊಂಡು, ಕೊನೆಗೆ ಚಪಾತಿಯ ಮೊರೆ ಹೋಗುವುದು ಯಾವ ಜಾಣತನ ಹೇಳಿ ?
ಕರ್ನಾಟಕದ ಕರಾವಳಿ ಜನ ಕುಚ್ಚಲಕ್ಕಿಯ ಕೈ ಬಿಡುತ್ತಿದ್ದಂತೆಯೇ ಕೇರಳ, ಅರಬ್ ದೇಶಗಳ ಜನರು ಅದರ ಮಹತ್ವವನ್ನು ಕಂಡುಕೊಂಡಿದ್ದಾರೆ. ಕರಾವಳಿಯ ಅಕ್ಕಿ ಗಿರಣಿಗಳಿಗೆ ಕೇರಳ, ದುಬೈ ಮತ್ತು ದೆಹಲಿಯ ಜನರು ಕುಚ್ಚಲಕ್ಕಿ ಕಳುಹಿಸುವಂತೆ ಕೋರುತ್ತಿರುವುದು ವಿಪರ್ಯಾಸ ಅಲ್ಲವೇ ?
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications