‘ಟೀವಿ ಚಾನೆಲ್‌ಗಳಲ್ಲಿ ಪೊಲೀಸರು ಮಾತಾಡುವುದು ಇನ್ನು ನಿಷಿದ್ಧ’
‘ಟೀವಿ ಚಾನೆಲ್‌ಗಳಲ್ಲಿ ಪೊಲೀಸರು ಮಾತಾಡುವುದು ಇನ್ನು ನಿಷಿದ್ಧ’
ಕ್ರೆೃಂ ಕಾರ್ಯಕ್ರಮಗಳ ಆರ್ಭಟದಲ್ಲಿ ಹೀರೋ ಆಗಹೊರಟ ಪೊಲೀಸರಿಗೆ ಕೃಷ್ಣ ನಿರ್ಬಂಧ
ಉದಯ ಹಾಗೂ ಈ ಟೀವಿಯಲ್ಲಿ ಪ್ರತಿ ರಾತ್ರಿ ಹತ್ತು ಗಂಟೆಗೆ ಕ್ರಮವಾಗಿ ಕ್ರೆೃಂ ಸ್ಟೋರಿ ಮತ್ತು ಕ್ರೆೃಂ ಡೈರಿ ಎಂಬ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರವ ಈ ಕಾರ್ಯಕ್ರಮಗಳಲ್ಲಿ ಉದಯ ಟೀವಿಯ ಕಾರ್ಯಕ್ರಮವನ್ನು ಬಾಲಕೃಷ್ಣ ಕಾಕತ್ಕರ್ ನಡೆಸಿಕೊಡುತ್ತಾರೆ. ಈ ಟೀವಿಯ ಕಾರ್ಯಕ್ರಮದ ಹೊಣೆಯನ್ನು ಪತ್ರಕರ್ತ ರವಿ ಬೆಳಗೆರೆ ಹೊತ್ತಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಕಾಣಸಿಕೊಳ್ಳುವುದು ಕೆಲವು ಪೊಲೀಸರ ತೆವಲಾಗುತ್ತಿದೆ. ಅಪರಾಧ ಘಟನೆಗಳ ಬಗ್ಗೆ ಟೀವಿ ಚಾನೆಲ್‌ಗಳಲ್ಲಿ ಮಾತನಾಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಕೃಷ್ಣ ಅಭಿಪ್ರಾಯ ಪಟ್ಟಿದ್ದು, ಯಾವ ಪೊಲೀಸರೂ ಚಾನೆಲ್‌ಗಳಿಗೆ ಸಂದರ್ಶನ ಕೊಡಕೂಡದೆಂದು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಅನುಮತಿಯಿಲ್ಲದೆ ಇನ್ನು ಮುಂದೆ ಯಾವುದೇ ಪೊಲೀಸ್ ಅಧಿಕಾರಿ ಟೀವಿ ಚಾನೆಲ್‌ಗಳಿಗೆ ಸಂದರ್ಶನ ಕೊಡಕೂಡದು. ಇದು ಸಿನಿಮಾ ಮಾಧ್ಯಮಕ್ಕೂ ಅನ್ವಯಿಸುತ್ತದೆ. ಹಾಗೆ ಮಾಡಿದವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ ಎಂದು ಪೊಲೀಸ್ ಮಹಾ ನಿರ್ದೇಶಕ ಟಿ. ಮಡಿಯಾಳ್ ಶುಕ್ರವಾರ (ನ.07) ಸುದ್ದಿಗಾರರಿಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications