ಹಿಂದುತ್ವದ ಬಯಲಿಂದ ಐಟಿ ಕ್ಷೇತ್ರದತ್ತ ಗುಜರಾತ್ ಸಿಎಂ ಮೋದಿ
ಹಿಂದುತ್ವದ ಬಯಲಿಂದ ಐಟಿ ಕ್ಷೇತ್ರದತ್ತ ಗುಜರಾತ್ ಸಿಎಂ ಮೋದಿ
ಬೆಂಗಳೂರಲ್ಲಿ ಮೋದಿ ಸಿಲಿಕಾನ್ ಮಾತುಗಳು
ನ. 7ರ ಶುಕ್ರವಾರದಂದು ಬೆಂಗಳೂರಿಗೆ ಆಗಮಿಸಿದ ಮೋದಿ, ತಾವು ಸಿಲಿಕಾನ್ ಸಿಟಿಯ ಐಟಿ ನಾಯಕರನ್ನು ಭೇಟಿಯಾಗಿ ಅವರ ಯಶಸ್ಸಿನ ಕತೆಗಳನ್ನು ಕೇಳುವ ಕುತೂಹಲ ವ್ಯಕ್ತಪಡಿಸಿದರು. ದೇಶ ವಿದೇಶದಿಂದ ಆಗಮಿಸಿ ಬೆಂಗಳೂರಿನಲ್ಲಿ ಐಟಿ ಮಳಿಗೆಗಳನ್ನು ತೆರೆದಿರುವ ಐಟಿ ತಂತ್ರಜ್ಞರಿಗೆ ಪಶ್ಚಿಮ ರಾಜ್ಯದಲ್ಲಿಯೂ ಐಟಿ ಕೇಂದ್ರ ತೆರೆಯಲು ಆಹ್ವಾನ ನೀಡುವುದಾಗಿ ಶುಕ್ರವಾರ (ನ. 07) ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆದರೆ ಗುಜರಾತ್‌ನಲ್ಲಿ ಆಗಾಗ ಹಿಂಸೆ ಮರುಕಳಿಸುತ್ತಿದೆ. ಈ ಬಗ್ಗೆ ಐಟಿ ಕಂಪೆನಿಗಳನ್ನು ಹೇಗೆ ಒಲಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, ವಾದಗಳ ಮೂಲಕ ಅವರನ್ನು ಒಲಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ . ನವರಾತ್ರಿಯ ಸಂದರ್ಭದಲ್ಲಿ ಕೆಲವು ಐಟಿ ಕಂಪೆನಿಗಳು ಗುಜರಾತ್‌ನಲ್ಲಿ ಮಳಿಗೆ ತೆರೆಯಲು ಒಪ್ಪಿವೆ. ಸುಮಾರು 66 ಸಾವಿರ ಕೋಟಿ ರೂಪಾಯಿಯ ಬಂಡವಾಳ ಹೂಡಿಕೆ ಕುರಿತು ಒಡಂಬಡಿಕೆಯಾಗಿದೆ. ಮನ ಒಲಿಸಿಕೊಳ್ಳಲು ಇನ್ನೇನು ಬಾಕಿಯಿದೆ ಎಂದು ಮೋದಿ ಮರುಪ್ರಶ್ನಿಸಿದರು.
ಹಿಂದುತ್ವದ ಬಗ್ಗೆ ಸುದ್ದಿಗಾರರು ಮೋದಿಯನ್ನು ಕೆಣಕಿದ್ದು ಹೀಗೆ- ನೀವು ಹಿಂದುತ್ವಕ್ಕೊಂದು ಮುಖವಾಣಿ ಇದ್ದ ಹಾಗೆ ಅಲ್ಲವಾ ?
ಅದಕ್ಕೆ ಮೋದಿ ಕೊಟ್ಟ ಜವಾಬು- ವೇದ ಕಾಲದಿಂದಲೂ ಇರುವ ಹಿಂದು ಧರ್ಮಕ್ಕೊಂದು ಮುಖವಾಣಿ ಬೇಕಾಗಿಲ್ಲ . 21ನೇ ಶತಮಾನದಲ್ಲಿ ಮುಖವಾಣಿಗಾಗಿ ಹಿಂದುತ್ವ ಅರಸುತ್ತಿಲ್ಲ !
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications