ಧರ್ಮಸ್ಥಳದ ಕ್ಷೇತ್ರದಲ್ಲಿ ನ. 22ರಂದು ಸರ್ವಧರ್ಮ ಸಮ್ಮೇಳನ
ಧರ್ಮಸ್ಥಳದ ಕ್ಷೇತ್ರದಲ್ಲಿ ನ. 22ರಂದು ಸರ್ವಧರ್ಮ ಸಮ್ಮೇಳನ
ಸಮ್ಮೇಳನಾಧ್ಯಕ್ಷರಾಗಿ ಡಾ. ಎಂ. ಎಂ. ಕಲಬುರ್ಗಿ
ನವೆಂಬರ್ 22 ರಂದು ಸರ್ವಧರ್ಮ ಸಮ್ಮೇಳನವನ್ನು ರಾಜ್ಯಪಾಲ ಟಿ. ಎನ್. ಚತುರ್ವೇದಿ ಉದ್ಘಾಟಿಸುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಖ್ಯಾತ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾಯರು ವಹಿಸುವರು.
ಸಮ್ಮೇಳನದಲ್ಲಿ ಹಿಂದೂ ಧರ್ಮ, ಕ್ರೆೃಸ್ತ ಮತ ಹಾಗೂ ಮುಸ್ಲಿಂ ಮತದ ಧಾರ್ಮಿಕ ನಾಯಕರು ಭಾಗವಹಿಸುವದಲ್ಲದೇ, ಚಿತ್ರದುರ್ಗದ ಪ್ರೊ. ಶ್ರೀಶೈಲಾರಾಧ್ಯ, ಮೈಸೂರಿನ ಪ್ರೊ. ಕೆ. ಅನಂತ ರಾಮು ಮತ್ತು ಬಿಜಾಪುರ ವಿಶ್ವ ವಿದ್ಯಾಲಯದ ನಿರ್ದೇಶಕ ಡಾ. ಎಂ. ಬಿ. ದಿಲ್‌ಶಾದ್ ಸಮ್ಮೇಳನದಲ್ಲಿ ಉಪನ್ಯಾಸಗಳನ್ನು ಮಾಡುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications