ಬೆಂಗಳೂರು ಕ್ರಿಕೆಟ್ ಪಂದ್ಯದ ಟಿಕೇಟುಗಳು ಬೇಗ ಸೌಲ್ಡ್ ಔಟ್
ಬೆಂಗಳೂರು ಕ್ರಿಕೆಟ್ ಪಂದ್ಯದ ಟಿಕೇಟುಗಳು ಬೇಗ ಸೌಲ್ಡ್ ಔಟ್
ಕೆಲವೇ ಗಂಟೆಗಳಲ್ಲಿ 13,500 ಟಿಕೇಟುಗಳು ಬಿಕರಿಯಾದವು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಎಣಿಸಲಾರದಷ್ಟು ಜನ ಟಿಕೇಟು ಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದರು. ಹಿಂದಿನ ದಿನ ರಾತ್ರಿ ಕ್ರೀಡಾಂಗಣದ ಪಕ್ಕದಲ್ಲೇ ಎಲ್ಲೆಂದರಲ್ಲಿ ಮಲಗಿ, ಎದ್ದಿದ್ದ ಮಂದಿಯ ಬಾಡಿದ ಮುಖ ಟಿಕೇಟು ಸಿಕ್ಕಾಗ ಅರಳಿತು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಟಿಕೇಟು ಸಿಗದವರು ಹ್ಯಾಪುಮೋರೆ ಹಾಕಿಕೊಂಡು ಮನೆಗೆ ಮರಳಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ಸೀಟುಗಳ ಸಂಖ್ಯೆ 45 ಸಾವಿರ. ಕ್ಲಬ್ಬು, ವಿಐಪಿಗಳು, ಪತ್ರಕರ್ತರು ಇವರೆಲ್ಲರ ಕೋಟಾ ಮುಗಿದ ನಂತರ ಸಾರ್ವಜನಿಕರಿಗೆ ಮಾರಲಾದ ಟಿಕೇಟುಗಳು ಕೇವಲ 13 ಸಾವಿರದ 500. ಇದರಲ್ಲಿ ಒಂದೂವರೆ ಸಾವಿರ ಸೀಟುಗಳು ಮಹಿಳೆಯರಿಗೆ ಮಾತ್ರ ಮೀಸಲಾದವು. ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಟಿಕೇಟು ಕೊಡಲು ಶುರುಮಾಡಿದರು. ಸರತಿ ಸಾಲಿನ ನೂಕುನುಗ್ಗಲು ಪೀಕಲಾಟ ತಪ್ಪಿಸಲು ಪೊಲೀಸರು ಬೆವರು ಹರಿಸಬೇಕಾಯಿತು. ಟಿಕೇಟು ಸಿಗದೆ ಕ್ರುದ್ಧರಾದ ಕೆಲವರನ್ನು ನಿಯಂತ್ರಿಸಲು ಪೊಲೀಸರು ಪರಿ ಪಾಟಲು ಅನುಭವಿಸಿದರು. ಮಧ್ಯಾಹ್ನಕ್ಕೆ ಮುನ್ನವೇ ಟಿಕೇಟುಗಳೆಲ್ಲ ಬಿಕರಿಯಾಗಿಹೋದವು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications