ಬೆಂಗಳೂರಿನಲ್ಲಿ ಪ್ರಥಮ ಜಾಗತಿಕ‘ವೇದ ವಿಜ್ಞಾನ’ ಸಮಾವೇಶ
ಬೆಂಗಳೂರಿನಲ್ಲಿ ಪ್ರಥಮ ಜಾಗತಿಕ‘ವೇದ ವಿಜ್ಞಾನ’ ಸಮಾವೇಶ
2004 ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ವೇದಘೋಷ !
ಐದು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ವೇದದ ಬಗ್ಗೆ ಅರಿವಿರುವ ಆಧುನಿಕ ವಿಜ್ಞಾನದ ವಿದ್ವಾಂಸರು ಹಾಗೂ ಆಧುನಿಕ ವಿಜ್ಞಾನ ತಿಳಕೊಂಡಿರುವ ಸಂಸ್ಕೃತ ವೇದ ವಿದ್ವಾಂಸರ ನಡುವೆ ಚರ್ಚಾಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಸಾಮಾಜಿಕ ವಿಜ್ಞಾನಿಗಳು, ತತ್ವಶಾಸ್ತ್ರ ವಿಜ್ಞಾನಿಗಳು, ಚರಿತ್ರೆ ಹಾಗೂ ಭಾಷಾ ಪರಿಣತರು ಸಮಾವೇಶದಲ್ಲಿ ಭಾಗವಹಿಸುವರು ಎಂದು ವಿಜ್ಞಾನ ಭಾರತೀಯ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಕೆ. ಐ. ವಾಸು ತಿಳಿಸಿದ್ದಾರೆ.
ಉಜ್ಜಯಿನಿಯ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ, ಭಾರತೀಯ ತತ್ವಶಾಸ್ತ್ರ ಅಧ್ಯಯನ ಪರಿಷತ್, ದೆಹಲಿಯ ರಾಷ್ಟ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ವಿಜ್ಞಾನ ಭಾರತಿ ಹಾಗೂ ಸ್ವದೇಶಿ ವಿಜ್ಞಾನ ಆಂದೋಳನವು ಈ ಐದು ದಿನಗಳ ಬೃಹತ್ ಜಾಗತಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications