ಬಾಣ- ಬಿರುಸುಗಳ ಚಿತ್ತಾರದಾಟದೊಂದಿಗೆ ಮುಗಿದ ಹಂಪಿ ಉತ್ಸವ
ಬಾಣ- ಬಿರುಸುಗಳ ಚಿತ್ತಾರದಾಟದೊಂದಿಗೆ ಮುಗಿದ ಹಂಪಿ ಉತ್ಸವ
ಮುಂದಿನ ವರ್ಷದಿಂದ 5 ದಿನಗಳ ಅವಧಿಯ ಹಂಪಿ ಉತ್ಸವ ನಡೆಸಲು ತೀರ್ಮಾನ
ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸಮಾರೋಪ ಸಮಾರಂಭದಲ್ಲಿ ಆಡಿದ ಮಾತುಗಳ ನಂತರ ಆಗಸದಲ್ಲಿ ಚಂದಿರ ಬಂದ. ಬಂಡೆಗಳ ಮೇಲಿರಿಸಿದ್ದ ದೀಪಗಳ ಬೆಳಕು ಹಾಗೂ ತಿಂಗಳ ಕಾಂತಿ ಇಡೀ ವಾತಾವರಣಕ್ಕೆ ಕಳೆ ಕೊಟ್ಟಿತ್ತು. ಇಂಥಾ ಬೆಳಕಿನಂಗಳದಲ್ಲಿ ಬಾಣ ಬಿರುಸುಗಳ ಭರಾಟೆ. ಚಿತ್ತಾರ ಬಿಡಿಸುವ ವಿವಿಧ ನಮೂನೆಯ ಬಾಣ ಬಿರುಸುಗಳು ಆಕಾಶದತ್ತ ಹಾಕಿ ಬೆಳಕಿನ ಕಿಡಿಗಳನ್ನು ಸಿಡಿಸಿದವು.
ಅದೇ ವೇಳೆಗೆ ಇನ್ನೊಂದು ಕಡೆ ಶಾಸ್ತ್ರೀಯ- ಸಂಗೀತ ನೃತ್ಯದ ರಸದೌತಣ. ಹೊರಗೆ ನಕ್ಷತ್ರ, ಚಕ್ರ ಇತ್ಯಾದಿ ನಮೂನೆಯ ಪಟಾಕಿಯ ಸಿಡಿ. ಇಷ್ಟೆಲ್ಲ ಮಧುರ ಕ್ಷಣಗಳನ್ನು ಸುಮಾರು 50 ಸಾವಿರ ಮಂದಿ ಕಣ್ಣುತುಂಬಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಖರ್ಗೆ , ಮುಂದಿನ ವರ್ಷದಿಂದ 5 ದಿನಗಳ ಕಾಲ ಹಂಪಿ ಉತ್ಸವವನ್ನು ಆಚರಿಸಲು ತೀರ್ಮಾನಿಸಿರುವುದಾಗಿಯೂ, ಅದಕ್ಕೆ ಕೇಂದ್ರ ಸರ್ಕಾರದ ಅನುದಾನವನ್ನು ಕೋರಿರುವುದಾಗಿಯೂ ಹೇಳಿ, ಸಂತೋಷದ ಸುದ್ದಿ ಕೊಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications