ಶ್ರೀಲಂಕಾದಲ್ಲಿ ರಾಜಕೀಯ ಚಂಡಮಾರುತ; ತುರ್ತು ಪರಿಸ್ಥಿತಿ ಜಾರಿ
ಶ್ರೀಲಂಕಾದಲ್ಲಿ ರಾಜಕೀಯ ಚಂಡಮಾರುತ; ತುರ್ತು ಪರಿಸ್ಥಿತಿ ಜಾರಿ
ಶಾಂತಿ ಪ್ರಕ್ರಿಯೆಗೆ ಭಂಗ ಬಾರದಿರಲಿ -ಕೋಫಿ ಅನ್ನಾನ್ ಆಶಯ
ಆಂತರಿಕ ವ್ಯವಸ್ಥೆ, ರಕ್ಷಣೆ, ಮಾಹಿತಿ ಇಲಾಖೆಯ ಸಚಿವರನ್ನು ಮಂಗಳವಾರ ಅಮಾನತುಗೊಳಿಸಲಾಗಿತ್ತು. ಇದರಿಂದಾಗಿ ದೇಶದಲ್ಲಿ ಎದ್ದಿರುವ ರಾಜಕೀಯ ಬಿರುಗಾಳಿಯನ್ನು ಹತ್ತಿಕ್ಕಲು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದು, ದೇಶದ ಆಂತರಿಕ ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಮಿಲಿಟರಿ ಪಡೆಗಳಿಗೆ ವಹಿಸಿಕೊಡಲಾಗಿದೆ.
ವಿಶ್ವಸಂಸ್ಥೆ ಕಳವಳ : ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಹೇರುವಿಕೆಯ ಬಗ್ಗೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಕೋಫಿ ಅನ್ನಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ತಾತ್ಕಾಲಿಕ ಬೆಳವಣಿಗೆಯಿಂದಾಗಿ ಎಲ್‌ಟಿಟಿಈ ಜೊತೆಗೆ ಸಾಗುತ್ತಿರುವ ಶಾಂತಿ ಪ್ರಕ್ರಿಯೆಯ ಮಾತುಕತೆಗೆ ಯಾವುದೇ ಭಂಗ ಬಾರದಿರಲಿ ಎಂದು ಅನ್ನಾನ್ ಆಶಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications