ಆರ್ಥಿಕ ಏರುಮುಖ : ‘ಕಾಸು ಬಾಸು’ ಹಾದಿಯಲ್ಲಿ ಕರ್ನಾಟಕ
ಆರ್ಥಿಕ ಏರುಮುಖ : ‘ಕಾಸು ಬಾಸು’ ಹಾದಿಯಲ್ಲಿ ಕರ್ನಾಟಕ
‘2005- 06 ರ ಹೊತ್ತಿಗೆ ರಾಜ್ಯದ ವಿತ್ತೀಯ ಕೊರತೆ 3% ತಗ್ಗಲಿದೆ’
ಬೆಂಗಳೂರು ಪ್ರೆಸ್ ಕ್ಲಬ್ ಬುಧವಾರ (ನ. 05) ಆಯೋಜಿಸಿದ್ದ ಸುದ್ದಿ ಸಂದರ್ಶನದಲ್ಲಿ ಅವರು ಮಾತಾಡುತ್ತಿದ್ದರು. ಅಂಕಿ- ಅಂಶಗಳಿಗೇ ಜೋತು ಬಿದ್ದು ಕೃಷ್ಣ ಹೇಳಿದ್ದಿಷ್ಟು-
- ಕಳೆದ ಕೆಲವು ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದೆ. ಇವತ್ತು 14 ಸಾವಿರ ಕೋಟಿಗೂ ಹೆಚ್ಚು ಸಾಫ್ಟ್‌ವೇರ್ ಉತ್ಪನ್ನಗಳು ರಾಜ್ಯದಿಂದ ರಫ್ತಾಗುತ್ತಿದ್ದು, ಈ ಕ್ಷೇತ್ರದಲ್ಲಿ ಕರ್ನಾಟಕವೇ ನಂಬರ್ ಒನ್.
- 2008ನೇ ಇಸವಿ ಹೊತ್ತಿಗೆ 10 ಲಕ್ಷ ಐಟಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
- ತಮಿಳುನಾಡು ಹಾಗೂ ಆಂಧ್ರಪ್ರದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನ ಪ್ರಮಾಣಕ್ಕಿಂತ ನಮ್ಮ ರಾಜ್ಯದ್ದು ಹೆಚ್ಚಾಗಿದೆ. ದೇಶದ ಉತ್ತರ ಭಾಗಗಳ ಎಲ್ಲಾ ರಾಜ್ಯಗಳ ರಫ್ತಿನ ಸರಕಿಗಿಂತ ಕೂಡ ಇದು ಹೆಚ್ಚು.
- ಇನ್ನು ಎಂಟು ವರ್ಷಗಳಲ್ಲಿ ಕರ್ನಾಟಕದಿಂದ 50 ಸಾವಿರ ಕೋಟಿ ರುಪಾಯಿ ಬೆಲೆಯ ಸಾಫ್ಟ್‌ವೇರ್ ಉತ್ಪನ್ನಗಳು ರಫ್ತಾಗಲಿವೆ.
- ರಾಜ್ಯದ ವಿತ್ತೀಯ ಕೊರತೆಯ ಪ್ರಮಾಣ 2005- 06ನೇ ಇಸವಿಯ ಹೊತ್ತಿಗೆ ಪ್ರತಿಶತ 3 ರಷ್ಟು ಕಡಿಮೆಯಾಗಲಿದೆ.
- ತೆರಿಗೆ ಸಂಗ್ರಹಣೆ 20 ರಿಂದ 22 ಪ್ರತಿಶತ ಹೆಚ್ಚಾಗಿದೆ. ಪ್ರಸಕ್ತ ವಿತ್ತ ವರ್ಷದಲ್ಲಿ 8 ಸಾವಿರ ಕೋಟಿ ರುಪಾಯಿ ತೆರಿಗೆ ಸಂಗ್ರಹಣೆಯ ಗುರಿಯಿದ್ದು, ಈಗಾಗಲೇ 4, 197 ಕೋಟಿ ರುಪಾಯಿ ಸಂಗ್ರಹವಾಗಿದೆ. ರಾಜ್ಯ ಈಗ ಆರ್ಥಿಕವಾಗಿ ಸಾಕಷ್ಟು ಏರುಗತಿಯಲ್ಲಿದೆ.
ಮುಖಪುಟ / ಕೃಷ್ಣಗಾರುಡಿ












Click it and Unblock the Notifications