ವಿವಾದಗಳ ನಾಟಕ : ಈಗ ರಂಗಾಯಣದ ನಿರ್ದೇಶಕರಾರಪ್ಪ ?
ವಿವಾದಗಳ ನಾಟಕ : ಈಗ ರಂಗಾಯಣದ ನಿರ್ದೇಶಕರಾರಪ್ಪ ?
ಪ್ರಸನ್ನರಿಂದ ರಾಜೀನಾಮೆ ನಂತರದ ಕಾಗದ ಪತ್ರಗಳ ಸಲ್ಲಿಕೆ
ರಂಗಾಯಣದ ನಿರ್ದೇಶಕರಾಗಿದ್ದ ಪ್ರಸನ್ನ ಅವರು ಎರಡು ತಿಂಗಳ ಹಿಂದೆಯೇ ತಮ್ಮ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆ ಅಂಗೀಕೃತವಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಸೋಮವಾರ (ನ. 3)ದಂದು ಪ್ರಸನ್ನ ಅವರು ರಂಗಾಯಣ ಕಚೇರಿಗೆ ಆಗಮಿಸಿದ್ದು, ರಾಜೀನಾಮೆ ನಂತರ ಚುಕ್ತಾ ಮಾಡಬೇಕಿದ್ದ ಎಲ್ಲ ಕಾಗದ ಪತ್ರಗಳನ್ನು ಒಪ್ಪಿಸಿ ರಂಗಾಯಣದಿಂದ ಹೊರ ನಡೆದಿದ್ದಾರೆ.
ಆದರೆ ಪ್ರಸನ್ನ ಅವರ ಕೈಯಿಂದ ಯಾವ ಅಧಿಕಾರಿಯೂ ಈ ಹುದ್ದೆಯನ್ನು ವಹಿಸಿಕೊಂಡಿಲ್ಲ ಎಂದು ರಂಗಾಯಣದ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ ರಂಗಾಯಣದ ನಿರ್ದೇಶಕರ ಹುದ್ದೆ ಖಾಲಿಯಾಗಿದ್ದು, ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications