52000 ಹೈಕಳ ಪೈಕಿ ಐಟಿಕ್ವಿಜ್ ಗೆದ್ದ ಉಡುಪಿಯ ‘ಲಿಟ್‌ಲ್ ರಾಕ್ಸ್’
52000 ಹೈಕಳ ಪೈಕಿ ಐಟಿಕ್ವಿಜ್ ಗೆದ್ದ ಉಡುಪಿಯ ‘ಲಿಟ್‌ಲ್ ರಾಕ್ಸ್’
ಗ್ರಾಮೀಣ ಐಟಿ ಕ್ವಿಜ್ ಈಗ ಲಿಮ್ಕಾ ಪುಸ್ತಕದಲ್ಲಿ ದಾಖಲು
ನ.2ರಂದು ನಡೆದ ಅಂತಿಮ ಸುತ್ತಿನಲ್ಲಿ ಈ ಇಬ್ಬರೂ ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲಿನ ಸಂಜನ ಹೆಗ್ಡೆ ಮತ್ತು ಕ್ಷಮಾ ವೈ.ಸಿ. ಅವರಿಂದ ಟಂಗಾಟುಂಗಿ ಸ್ಪರ್ಧೆ ಎದುರಿಸಬೇಕಾಯಿತು. ಎರಡೂ ತಂಡಗಳ ನಡುವೆ ಟೈ ಬ್ರೇಕರ್ ಪ್ರಶ್ನೆ ಎಸೆಯಬೇಕಾಯಿತು. ಆಗ ವಿಜಯಲಕ್ಷ್ಮಿ ಒಲಿದಿದ್ದು ಲಿಟ್‌ಲ್ ರಾಕ್ ವಿದ್ಯಾರ್ಥಿಗಳಿಗೆ.
ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಈ ಕ್ವಿಜ್ ಕಾರ್ಯಕ್ರಮವನ್ನು ನಡೆಸಲಾಯಿತು. ಅಕ್ಟೋಬರ್ ಮೊದಲ ವಾರದಲ್ಲೇ ಕ್ವಿಜ್‌ನ ಮೊದಲ ಸುತ್ತು ಶುರುವಾಯಿತು. ರಾಜ್ಯದ 27 ಜಿಲ್ಲೆಗಳ 52 ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಗೆ ಎದೆಗೊಟ್ಟರು. 6 ಜಿಲ್ಲೆಗಳಲ್ಲಿ ಮೊಲ ಸುತ್ತಿನ ಸ್ಪರ್ಧೆ ನಡೆಸಲಾಯಿತು- ಗುಲ್ಬರ್ಗಾ, ಮೈಸೂರು, ಮಂಗಳೂರು, ಬೆಂಗಳೂರು ಗ್ರಾಮೀಣ, ಧಾರವಾಡ ಮತ್ತು ಬಳ್ಳಾರಿ.
ಪಿಕ್‌ಬ್ರೇನ್ ಗಿರಿ ಬಾಲಸುಬ್ರಮಣ್ಯಂ ಅವರು ಕೇಳಿದ ಪ್ರಶ್ನೆಗಳಿಗೆ ಸಮರ್ಥ ಉತ್ತರಗಳನ್ನು ಕೊಟ್ಟು, 6 ಸುತ್ತುಗಳ ನಂತರ ಫೈನಲ್ಸ್ ಪ್ರವೇಶಿಸಿದವರು-
ಬಿಜಾಪುರ ಸೈನಿಕ್ ಶಾಲೆಯ ಪ್ರಶಾಂತ್ ಎಸ್. ಭಟ್- ಶ್ರೀನಿವಾಸ್ ಜಿ. ವಿದ್ಯಾ
ತುಮಕೂರು ಸಿದ್ಧಗಂಗಾ ಹೈಸ್ಕೂಲ್‌ನ ಮಹೇಶ್ ಕುಮಾರ್ ಮತ್ತು ವಿನಯ್ ಕುಮಾರ್
ಉಡುಪಿಯ ಲಿಟ್‌ಲ್ ರಾಕ್ ಸ್ಕೂಲ್‌ನ ಅಶ್ವಿನ್ ಪಿ ಮತ್ತು ಸಮರ್ಥ ಕುದ್ಕಾಕರ್
ಮಂಡ್ಯ ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲಿನ ಸಂಜನ ಹೆಗ್ಡೆ ಮತ್ತು ಕ್ಷಮಾ ವೈ.ಸಿ.
ಗದಗಿನ ಜೆ.ಟಿ.ಕಾಲೇಜಿನ ಕರೀಂ ಖಾನ್ ಮತ್ತು ಮೃತ್ಯುಂಜಯ
ಸಿರಗುಪ್ಪ ವಿಕೆಜೆ ಪದವಿ ಪೂರ್ವ ಕಾಲೇಜಿನ ವಿನಯ್ ಕುಮಾರ್ ಮತ್ತು ಎಸ್.ಕೆ.ಶ್ರೀಧರ್.
ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು 50 ಸಾವಿರ ರುಪಾಯಿ ಮೊತ್ತದ ವಿದ್ಯಾರ್ಥಿ ವೇತನ ಬಹುಮಾನದ ರೂಪದಲ್ಲಿ ಸಿಕ್ಕಿತು. ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರಿಗೆ ಕ್ರಮವಾಗಿ 30 ಸಾವಿರ ಹಾಗೂ 20 ಸಾವಿರ ರುಪಾಯಿ ವಿದ್ಯಾರ್ಥಿ ವೇತನ ಸಿಕ್ಕಿತು. 4, 5 ಹಾಗೂ 6 ನೇ ಸ್ಥಾನ ಪಡೆದ ಮಕ್ಕಳು ತಲಾ 10 ಸಾವಿರ ರುಪಾಯಿ ವಿದ್ಯಾರ್ಥಿವೇತನ ಗಿಟ್ಟಿಸಿಕೊಂಡರು. ಫೈನಲ್ಸ್ ಪ್ರವೇಶಿಸಿದ ಎಲ್ಲ ಸ್ಪರ್ಧಾಳುಗಳಿಗೂ ಆಡಿಯೋ ಸಿಸ್ಟಂಗಳನ್ನು ಬಹುಮಾನದ ರೂಪದಲ್ಲಿ ಕೊಡಲಾಯಿತು.
ಗ್ರಾಮೀಣ ಮಕ್ಕಳಿಗಾಗಿಯೇ ನಡೆಸುತ್ತಿರುವ ಏಕೈಕ ಕ್ವಿಜ್ ಕಾರ್ಯಕ್ರಮ ಎಂಬ ಕಾರಣಕ್ಕೆ ಐಟಿ ಕ್ವಿಜ್ ಲಿಮ್ಕಾ ದಾಖಲೆ ಪುಸ್ತಕವನ್ನೂ ಪ್ರವೇಶಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಐಟಿ - ಬಿಟಿ












Click it and Unblock the Notifications