ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಸೆಳಕುಗಳು
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಸೆಳಕುಗಳು
ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ. ಕಿಕ್ಕಿರಿದ ಜನ. ಮುಂದಿನ ಬಾರಿಯಿಂದ ಹೊರಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಿರೀಕ್ಷೆ
[email protected]
ನವಂಬರ್ 1, ಶನಿವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ರಂಗುರಂಗಾಗಿ ನಡೆಯಿತು. ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸತತ 5ನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಪುಳಕ ಅನುಭವಿಸಿದರು. 56 ಮಂದಿ ಮತ್ತು 4 ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪುರಸ್ಕೃತರನ್ನು ಶಾಲು, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೈ.ಕೆ. ಮುದ್ದುಕೃಷ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕುವೆಂಪುರವರ ಜಯ ಭಾರತ ಜನನಿಯ ತನುಜಾತೆ ಎಂಬ ನಾಡ ಗೀತೆಯಿಂದ ಪ್ರಾರಂಭವಾಯಿತು ಕಾರ್ಯಕ್ರಮ. ರಾಷ್ಟ್ರಗೀತೆಯ ಹಾಗೆ ನಾಡಗೀತೆಗೂ ಎದ್ದು ನಿಂತು ಗೌರವ ಸೂಚಿಸಬೇಕೆಂಬ ಮುದ್ದುಕೃಷ್ಣರ ಕರೆಗೆ ಮುಖ್ಯಮಂತ್ರಿ ಸಹಿತ ಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಆನಂತರದ ಉಷಾ ಗಣೇಶ್ ಅವರ ‘ಖನ್ನಡ’ ಸ್ವಾಗತ ಭಾಷಣ.... ಅಬ್ಬಬ್ಬಾ...
ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರನ್ನು ಸಾಂಕೇತಿಕವಾಗಿ ಗುರುತಿಸಿ ಗೌರವಿಸಲಾಗುತ್ತದೆ. ಗಣ್ಯರನ್ನು ಗೌರವಿಸುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಳ್ಳುತ್ತಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಮಹನೀಯರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿರುತ್ತದೆ. 5 ಕೋಟಿ ಕನ್ನಡಿಗರಲ್ಲಿ ಪ್ರತಿ ವರ್ಷ ಸುಮಾರು 60 ಜನಕ್ಕೆ ಪ್ರಶಸ್ತಿ ಆರಿಸುವುದು ಬಹಳ ಕಷ್ಟದ ಕೆಲಸ. ಇಂತಹ ಕೆಲಸ ಮಾಡಿದ ಆಯ್ಕೆ ಸಮಿತಿಗೆ ಅಭಿನಂದನೆ ಎಂದು ಪ್ರಶಸ್ತಿ ಪ್ರದಾನ ಮಾಡಿದ ಕೃಷ್ಣ ಹೇಳಿದರು. ಕಲೆ, ಸಂಸ್ಕೃತಿ, ಸಾಹಿತ್ಯ, ನೆಲ, ಜಲದ ಸಂರಕ್ಷಣೆಗೆ ಎಲ್ಲರೂ ಕಂಕಣ ಬದ್ಧರಾಗಬೇಕು ಎಂದು ಅವರು ಕರೆ ನೀಡಿದರು.
ರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯಮಂತ್ರಿ ಕೃಷ್ಣ ಮಹತ್ವದ ಯಾವುದೇ ಹೊಸ ಯೋಜನೆಯನ್ನು ಪ್ರಕಟಿಸಲಿಲ್ಲ. ಬದಲಿಗೆ ಈ ವರ್ಷದಿಂದ ನಾಡಿನ ಭಾವೈಕ್ಯತೆಗೆ, ಸಮಗ್ರತೆಗೆ ದುಡಿಯುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಗೌರವಿಸುವ ಹೊಸ ಪ್ರಶಸ್ತಿಯನ್ನು ಆರಂಭಿಸಲಾಗುವುದು ಎಂದರು.
ಪ್ರಶಸ್ತಿ ಪಡೆದ ಪ್ರತಿಭಾ ಸಂಪನ್ನರೆಲ್ಲರೂ ನಾಡಿನ ಅಭಿಮಾನದ ಮತ್ತು ಹೆಮ್ಮೆಯ ಸಂಕೇತ. ಅವರು ಪ್ರಶಸ್ತಿ ಸ್ವೀಕರಿಸಲು ಒಪ್ಪಿರುವುದು ಸರ್ಕಾರಕ್ಕೆ ದೊರೆತ ಮನ್ನಣೆ ಎಂದು ಪ್ರಶಸ್ತಿ ಪಡೆದವರನ್ನು ಹೊಗಳಿದರು.
ನಂತರ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್- ಅಧಿಕಾರದಲ್ಲಿರುವವರನ್ನು ಸಂಶಯದಿಂದ ನೋಡುವುದು ಸಹಜ. ಹಾಗೆಯೇ ಪ್ರಶಸ್ತಿಗಳಿಗೆ ಸಂಬಂಧಿಸಿದಂತೆ ಟೀಕೆಗಳು ಇದ್ದೇ ಇರುತ್ತವೆ ಎಂದು ಪ್ರಶಸ್ತಿ ಆಯ್ಕೆಯ ಬಗ್ಗೆ ಸಮರ್ಥಿಸಿಕೊಂಡರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ವಿಮಲಾ ರಂಗಾಚಾರ್- ಕಳೆದ ಮೂರು ವರ್ಷಗಳಿಂದ ನಿರ್ದಿಷ್ಟ ಸಂಖ್ಯೆಯ ಪ್ರಶಸ್ತಿಗಳನ್ನು ನಿಗದಿಪಡಿಸಿ ಅಭಿನಂದಿಸುತ್ತಿರುವ ಸರ್ಕಾರದ ಕಾರ್ಯ ವೈಖರಿಯನ್ನು ಪ್ರಶಂಸಿಸಿದರು.
ಆಹ್ವಾನವಿಲ್ಲದೆಯೂ ತಾವಾಗಿಯೇ ಮಾತನಾಡಲು ಮುಂದಾದವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಟಿ ತಾರಾ. ಮಾತಿನ ಭರದಲ್ಲಿ 48ನೇ ಪ್ರಶಸ್ತಿ ಸಮಾರಂಭವನ್ನು 53ನೇ ಸಮಾರಂಭವೆಂದು ತಪ್ಪಾಗಿ ನುಡಿದ ತಾರಾ, ಮುಂದಿನ ಬಾರಿ ಪ್ರಶಸ್ತಿಯನ್ನು ಮಹಿಳಾ ಮುಖ್ಯಮಂತ್ರಿ ನೀಡುವಂತಾಗಲಿ ಎಂದು ಆಶಿಸಿದರು.
ಶರಪಂಜರದ ನಾಯಕ ನಟ ಗಂಗಾಧರ್ ಅವರು ಪ್ರಶಸ್ತಿ ಸ್ವೀಕರಿಸಿದ ಘಳಿಗೆಗಳು ಭಾವುಕವಾಗಿದ್ದವು. ತೀವ್ರ ಅನಾರೋಗ್ಯದಿಂದ ದೃಷ್ಟಿ ಕಳೆದುಕೊಂಡಿರುವ ಗಂಗಾಧರ್, ತಮಗೆ ಪ್ರಶಸ್ತಿ ದೊರೆತ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಲು ಜನ ಕಿಕ್ಕಿರಿದು ಸೇರಿದ್ದರು. ಸಭಾಂಗಣದಲ್ಲಿ ಜಾಗ ಸಾಲದೆ, ಸಭಾಂಗಣದ ಹೊರಗೂ ಜನರ ಗುಂಪಿತ್ತು . ಹೆಚ್ಚಿನ ಜನರು ವೀಕ್ಷಿಸಲು ಅನುಕೂಲವಾಗುವಂತೆ ಇಂಥ ಸಮಾರಂಭಗಳನ್ನು ಹೊರಾಂಗಣದಲ್ಲಿ ಏರ್ಪಡಿಸಬೇಕು ಎಂದು ಕೆಲವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಕೃಷ್ಣ ಹೂಗುಟ್ಟಿದರು.
ವಾರ್ತಾ ಸಂಚಯ
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಮಳವಳ್ಳಿ-ಜಗದೀಶ್‌ಗೆ ಮಕುಟ
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications