ರಾಜ್ಯೋತ್ಸವ ಕೊಡುಗೆ-ಕಡುಬಡವರಿಗೆ ಪಡಿತರ ದರದ ದಿನಸಿ
ರಾಜ್ಯೋತ್ಸವ ಕೊಡುಗೆ-ಕಡುಬಡವರಿಗೆ ಪಡಿತರ ದರದ ದಿನಸಿ
ಬಡತನ ರೇಖೆಗಿಂತ ಕೆಳಗಿರುವ 63 ಲಕ್ಷ ಕುಟುಂಬಗಳ ತುತ್ತಿನಚೀಲಕ್ಕೆ ಚಿಂತಿಲ್ಲ
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ (ಅ. 31) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈಗಾಗಲೇ ಹಸಿರು ಕಾರ್ಡುಗಳ ಬದಲಿಗೆ ಹಳದಿ ಕಾರ್ಡುಗಳನ್ನು ವಿತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ಮಾಹೆಗೊಮ್ಮೆ 28 ಕಿಲೋ ಅಕ್ಕಿ, 7 ಕಿಲೋ ಗೋಧಿ ಮತ್ತು 10 ಲೀಟರ್ ಸೀಮೆಎಣ್ಣೆಯನ್ನು ಪಡಿತರ ದರದಲ್ಲಿ ಕೊಡಲಾಗುವುದು. ಇನ್ನೂ 11 ಲಕ್ಷ ಬಡ ಕುಟುಂಬಗಳ ಅರ್ಜಿಗಳು ವಿಲೇವಾರಿಯಾಗಿಲ್ಲ. ಈ ಪೈಕಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಬಗ್ಗೆ ದೃಢೀಕೃತ ಮಾಹಿತಿ ಪಡೆದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ನಗರದಲ್ಲಿ ವಾರ್ಷಿಕ 17 ಸಾವಿರ ರುಪಾಯಿ ಹಾಗೂ ಹಳ್ಳಿಗಳಲ್ಲಿ ವಾರ್ಷಿಕ 12 ಸಾವಿರ ರುಪಾಯಿ ಆದಾಯ ಇರುವ ಕುಟುಂಬಗಳು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹವಾಗಿರುತ್ತವೆ. ಕೆಲವು ದಿನಗಳಿಂದ ನಿಲ್ಲಿಸಿರುವ ಪಡಿತರ ದರದಲ್ಲಿ ಧಾನ್ಯ ಹಂಚಿಕೆ ಈಗ ಪುನರಾರಂಭವಾಗುತ್ತಿದೆ. ಬಡ ಜನತೆಗೆ ಇದು ಸರ್ಕಾರದ ರಾಜ್ಯೋತ್ಸವದ ಕೊಡುಗೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications