ವಾರಂಬಳ್ಳಿ ಕೆರೆಯಲ್ಲಿ ಆಯತಪ್ಪಿ ಮುಳುಗಿದ ನತದೃಷ್ಟ ಸೋದರರು

ವಾರಂಬಳ್ಳಿ ಕೆರೆಯಲ್ಲಿ ಆಯತಪ್ಪಿ ಮುಳುಗಿದ ನತದೃಷ್ಟ ಸೋದರರು
ಕುಂದಾಪುರದಲ್ಲಿ ಗೃಹಿಣಿಯ ಆತ್ಮಹತ್ಯೆ

ಮಣಿಪಾಲ : ಉಡುಪಿ ಜಿಲ್ಲೆಯ ಬ್ರಹ್ಮಾಪುರಕ್ಕೆ ಸಮೀಪದ ವಾರಂಬಳ್ಳಿ ಕೆರೆಗೆ ಮೀನು ಹಿಡಿಯಲು ಬಂದಿದ್ದ ಇಬ್ಬರು ನತದೃಷ್ಟ ಸಹೋದರರು ನೀರಿನಲ್ಲಿ ಮುಳುಗಿ ಸತ್ತಿದ್ದಾರೆ.

ಸಾಲಿಕೇರಿಯಿಂದ ವಾರಂಬಳ್ಳಿಗೆ ಮೀನು ಹಿಡಿಯಲು ಬಂದಿದ್ದ ನೇತನ್‌ ಹಾಗೂ ನೆಲ್ಸನ್‌ ಎನ್ನುವ ಸೋದರರು ಮುಳುಗಿ ಸತ್ತಿದ್ದಾರೆ. ಆಯತಪ್ಪಿ ನೀರಿಗೆ ಬಿದ್ದ ಸೋದರನನ್ನು ರಕ್ಷಿಸಲು ಇನ್ನೊಬ್ಬ ವಿಫಲ ಯತ್ನ ನಡೆಸಿದ್ದು , ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಈ ದುರ್ಘಟನೆ ಗುರುವಾರ ಸಂಭವಿಸಿದೆ ಎಂದು ಪೊಲೀಸರು ಶುಕ್ರವಾರ (ಅ.31) ಸುದ್ದಿಗಾರರಿಗೆ ತಿಳಿಸಿದರು.

ನೇತನ್‌ ಎನ್ನುವ 35 ವರ್ಷದ ನತದೃಷ್ಟ ಅಬುದಬಿಯಲ್ಲಿ ಉದ್ಯೋಗದಲ್ಲಿದ್ದ. ನೆಲ್ಸನ್‌ ಬೆಂಗಳೂರಿನಲ್ಲಿದ್ದ. ಕಳೆದ ವಾರವಷ್ಟೇ ಇವರಿಬ್ಬರೂ ತವರಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದ ಮಹಿಳೆಯಾಬ್ಬಳು ಗುರುವಾರ ನೇಣು ಹಾಕಿಕೊಂಡು ಸತ್ತಿದ್ದಾಳೆ. ಆಕೆಗೆ 29 ವರ್ಷ ವಯಸ್ಸು . ಈ ಮುನ್ನ ಈಕೆಯ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದು , ಗಂಡನ ಸಾವಿನಿಂದ ನೊಂದ ಹೆಣ್ಣುಮಗಳು ನೇಣು ಹಾಕಿಕೊಂಡಿದ್ದಾಳೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+