ಕಳ್ಳತನ ಮಾಡಿದ ಲಕ್ಷಾಂತರ ರೂಗಳನ್ನು ಲಾಟರಿಗೆ ಸುರಿದ ಕಳ್ಳರು
ಕಳ್ಳತನ ಮಾಡಿದ ಲಕ್ಷಾಂತರ ರೂಗಳನ್ನು ಲಾಟರಿಗೆ ಸುರಿದ ಕಳ್ಳರು
ಮಂಗಳೂರು ಪೊಲೀಸರಿಂದ ಮೂಡಬಿದ್ರೆ ದರೋಡೆ ಪ್ರಕರಣದಲ್ಲಿ ಭಾಗಿಯಾದವರ ಸೆರೆ
ಬಂಧಿತ ಆಪಾದಿತರು ನಾಲ್ಕು ದರೋಡೆ ಪ್ರಕರಣಗಳಲ್ಲಿ ಭಾಗವಹಿಸಿದ್ದು, ಬಂಗಾರದೊಡವೆ, ಲಕ್ಷಗಟ್ಟಲೆ ನಗದು ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸೀಮಂತ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿಯಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 700 ಗ್ರಾಮ್ ಚಿನ್ನ ಹಾಗೂ ಲಕ್ಷಕ್ಕೂ ಮಿಕ್ಕಿದ ಹಣವನ್ನು ದರೋಡೆಕೋರರು ದೋಚಿದ್ದಾರೆ. ಕದ್ದಿರುವ ಹಣವನ್ನು ಆಪಾದಿತರು ಸಿಂಗಲ್ ನಂಬರ್ ಲಾಟರಿಯಲ್ಲಿ ತೊಡಗಿಸಿ ಹಾಳು ಮಾಡಿದ್ದಾರೆ ಎಂದು ಸೀಮಂತಕುಮಾರ್ ಹೇಳಿದರು.
ಬಂಧಿತ ದರೋಡೆಕೋರರ ಗುಂಪಿನಲ್ಲಿ ಒಟ್ಟು ಹದಿಮೂರು ಮಂದಿಯಿದ್ದು , ಉಳಿದ ಮೂವರ ಬಂಧನಕ್ಕಾಗಿ ಪೊಲೀಸರ ಕಾರ್ಯಾಚಾರಣೆ ಮುಂದುವರೆದಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications