ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರೇ ?
ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರೇ ?
ಮೈಸೂರಿನಲ್ಲಿ ಪ್ರೊ. ರಾಮ್‌ದಾಸ್ ಸಭೆಯಲ್ಲಿ ಗೋಮಾಂಸ ಪುರಾಣ
ಈ ವಿಷಯವನ್ನು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಸ್ವತಃ ರಾಮ್‌ದಾಸ್ ಬಹಿರಂಗ ಪಡಿಸಿದರು. ರಾಮ್‌ದಾಸ್ ಅವರಿಗೆ ಅಖಿಲಾ ಭಾರತ ಬ್ರಾಹ್ಮಣ ಸಭಾ(ರಿ)ದ ಅಧ್ಯಕ್ಷ ಬಿ. ಎನ್. ಸುಬ್ರಹ್ಮಣ್ಯ ಎಂಬವರು ಬೆದರಿಕೆಯ ಪತ್ರ ಬರೆದಿದ್ದು, ರಾಮ್‌ದಾಸ್ ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಿಗೂ ಅಡ್ಡಿಪಡಿಸುವುದಾಗಿ ಬೆದರಿಸಿದ್ದಾರೆ. ಈ ಕುರಿತು ಈಗಾಗಲೇ ರಾಮ್‌ದಾಸ್, ಕುವೆಂಪು ನಗರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರ್ನಾಟಕ ಪ್ರಗತಿರಂಗ ಮಾಧ್ಯಮಗೋಷ್ಠಿಯನ್ನು ಆಯೋಜಿಸಿತ್ತು. ಗೋಷ್ಠಿಯಲ್ಲಿ ಪ್ರೊ. ಲಿಂಗದೇವರು ಹಳೇಮನೆ, ಹೊರೆಯಾಲ ದೊರೆಸ್ವಾಮಿ, ಕೆ. ನ. ಶಿವತೀರ್ಥನ್ ಮತ್ತು ಕಾರ್ಮಿಕ ನಾಯಕ ಲ.ಜಗನ್ನಾಥ್ ಅವರೂ ಹಾಜರಿದ್ದು ಬ್ರಾಹ್ಮಣ ಮಹಾಸಭಾದ ವರ್ತನೆಯನ್ನು ಖಂಡಿಸಿದರು.
ಬ್ರಾಹ್ಮಣರು ಹಿಂದಿನಿಂದಲೂ ಗೋಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆಯನ್ನು ಹತ್ತಾರು ಗ್ರಂಥಗಳನ್ನು ಪ್ರದರ್ಶಿಸುವ ಮೂಲಕ ಮಾಧ್ಯಮಗೋಷ್ಠಿಯಲ್ಲಿ ಮತ್ತೊಮ್ಮೆ ಸಮರ್ಥಿಸಲಾಯಿತು. ಚಾರಿತ್ರಿಕ ಪುಸ್ತಕಗಳಲ್ಲಿ, ಮೀಮಾಂಸೆ ಗ್ರಂಥಗಳಲ್ಲಿ , ವೇದ ಗ್ರಂಥಗಳಲ್ಲಿ ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದ ಬಗ್ಗೆ ವಿವರಗಳಿವೆ. ಇದು ಬ್ರಾಹ್ಮಣರಿಗೂ ಗೊತ್ತಿದೆ ಎಂದ ರಾಮ್‌ದಾಸ್ ಬ್ರಾಹ್ಮಣರದ್ದು ವಿತಂಡ ವಾದ ಎಂದು ದೂಷಿಸಿದರು.
ರಾಜೇಂದ್ರಲಾಲ್ ಮಿಶ್ರಾ, ಅಬೆ ದುಬೈ, ಧರ್ಮಾನಂದ ಕೋಶಾಂಬಿ, ಬಿ. ವಿ. ವೀರಭದ್ರಪ್ಪ ಬರೆದಿರುವ ಪುಸ್ತಕಗಳನ್ನು ಹಾಗೂ ಮನುಸ್ಮೃತಿಯನ್ನು ಪ್ರದರ್ಶಿಸಿ, ಅವುಗಳಲ್ಲಿ ಬ್ರಾಹ್ಮಣರ ಗೋಮಾಂಸ ಭಕ್ಷಣೆಯ ಬಗ್ಗೆ ಉಲ್ಲೇಖ ಇರುವುದಾಗಿ ಹೇಳಿದರು.
ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ ಗೋಮಾಂಸ ತಿನ್ನುವವರ ನಾಲಗೆ ಕತ್ತರಿಸುವುದಾಗಿ ಇತ್ತೀಚೆಗೆ ಹೇಳಿರುವುದನ್ನು ಮಾಧ್ಯಮಗೋಷ್ಠಿಯಲ್ಲಿ ಖಂಡಿಸಲಾಯಿತು.
(ಇನ್ಫೋ ವಾರ್ತೆ)
ಬ್ರಾಹ್ಮಣರು ಗೋಮಾಂಸ ತಿನ್ನುವ ಬಗ್ಗೆ ನೀವೇನಂತೀರಿ ?
ಇದನ್ನೂ ಓದಿ
ಬ್ರಾಹ್ಮಣರೂ ಎಳೆ ಕರುಗಳ ಮಾಂಸ ತಿನ್ನುತ್ತಿದ್ದರು- ಕೆ.ರಾಮದಾಸ್
ಮುಖಪುಟ / ವಾಟ್ಸ್ ಹಾಟ್












Click it and Unblock the Notifications