ಬೆಂಗಳೂರು: ಪ್ಲೇವಿನ್ ಕಚೇರಿ ಮೇಲೆ ಕನ್ನಡ ಚಳವಳಿಕಾರರ ದಾಳಿ
ಬೆಂಗಳೂರು: ಪ್ಲೇವಿನ್ ಕಚೇರಿ ಮೇಲೆ ಕನ್ನಡ ಚಳವಳಿಕಾರರ ದಾಳಿ
ಆನ್‌ಲೈನ್ ಲಾಟರಿ ನಿಷೇಧ ಒತ್ತಾಯಿಸಿ ಪ್ರತಿಭಟನೆ, ಲೂಟಿ.
ರಾಜ್ಯದಲ್ಲಿ ಆನ್‌ಲೈನ್ ಲಾಟರಿಯನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಈ ಪ್ರತಿಭಟನಾ ದಾಳಿಯನ್ನು ನಡೆಸಿದರು. ಕನ್ಹಿಂಗ್‌ಹ್ಯಾಂ ರಸ್ತೆಯಲ್ಲಿನ ಕಚೇರಿಯ ಮೇಲೆ ದಾಳಿ ನಡೆಸಿರುವ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಪ್ಲೇವಿನ್ ಲಾಟರಿಯನ್ನು ವಿರೋಧಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಈ ದಾಳಿಯಲ್ಲಿ ಪೀಠೋಪಕರಣ ಹಾಗೂ ಕಂಪ್ಯೂಟರ್‌ಗಳು ಧ್ವಂಸಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಎರಡು ಪ್ಲೇವಿನ್ ಕೇಂದ್ರಗಳ ಮೇಲೆಯೂ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದರು.
ಪ್ರತಿಪಕ್ಷಗಳು ಹಾಗೂ ರೈತರು ಆನ್‌ಲೈನ್ ಲಾಟರಿಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದು, ಲಾಟರಿ ನಿಷೇಧದ ಕುರಿತು ಮುಖ್ಯಮಂತ್ರಿ ಕೃಷ್ಣ ಅವರ ಮೇಲಿನ ಒತ್ತಡ ಹೆಚ್ಚುತ್ತಿದೆ. ಪ್ರಸ್ತುತ, ಪ್ರತಿಭಟನೆಗೆ ಕನ್ನಡ ಚಳವಳಿಕಾರರ ಸೇರ್ಪಡೆಯಿಂದಾಗಿ ಆನ್‌ಲೈನ್ ಲಾಟರಿಗೆ ವಿರೋಧ ಮತ್ತಷ್ಟು ಹೆಚ್ಚಿದಂತಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications