Get Updates
Get notified of breaking news, exclusive insights, and must-see stories!

ಮೈಸೂರು ವಿವಿ ಕುಲಪತಿಯಾಗಿ ದೇಜಗೌ ಪುತ್ರ ಪ್ರೊ.ಜೆ. ಶಶಿಧರ್‌

ಮೈಸೂರು ವಿವಿ ಕುಲಪತಿಯಾಗಿ ದೇಜಗೌ ಪುತ್ರ ಪ್ರೊ.ಜೆ. ಶಶಿಧರ್‌
ಮೈಸೂರಿನವರೇ ಆದ ಶಶಿಧರ್‌ ಪ್ರಸಾದ್‌ ಆಕ್ಸ್‌ಫರ್ಡ್‌ನಲ್ಲಿ ಕಲಿತಿವರು

ಬೆಂಗಳೂರು : ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಜೆ. ಶಶಿಧರ್‌ ಪ್ರಸಾದ್‌ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಬುಧವಾರ (ಅ. 22) ಸಂಜೆ ಶಶಿಧರ್‌ ಅವರ ನೇಮಕಾತಿ ಆದೇಶ ಹೊರಡಿಸಿದರು. ಸೆ. 4ನೇ ತಾರೀಕಿನಿಂದ ಹಂಗಾಮಿ ಕುಲಪತಿಗಳಾಗಿ ಕೆಲಸ ಮಾಡುತ್ತಿದ್ದ ಶಶಿಧರ್‌ ಇನ್ನು 4 ವರ್ಷಗಳ ಅವಧಿಗೆ ಮೈಸೂರು ವಿವಿ ಕುಲಪತಿಗಳಾಗಿ ಕೆಲಸ ಮಾಡಲಿದ್ದಾರೆ.

ಮೈಸೂರಿನವರೇ ಆದ ಶಶಿಧರ್‌ ಪ್ರಸಾದ್‌ ಇದೇ ವಿವಿಯ ವಿಶ್ರಾಂತ ಕುಲಪತಿ ಹಾಗೂ ‘ಬೂಸಾ ಖ್ಯಾತಿ’ಯ ಸಾಹಿತಿ ದೇ.ಜವರೇಗೌಡರ ಪುತ್ರ. 1972ನೇ ಇಸವಿಯಿಂದ ಮಾನಸ ಗಂಗೋತ್ರಿಯಲ್ಲಿ ಉಪನ್ಯಾಸಕರಾಗಿ ಕೆಲಸ ಶುರುಮಾಡಿದ ಶಶಿಧರ್‌, 1984ರಲ್ಲಿ ಪ್ರೊಫೆಸರ್‌ ಆಗಿ ಬಡ್ತಿ ಪಡೆದರು. ಈಗ ಅವರು ಹಿರಿಯ ಡೀನ್‌ ಆಗಿದ್ದಾರೆ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಹೆಚ್ಚಿನ ಅಧ್ಯಯನ ನಡೆಸಿರುವ ಇವರು, ದೇಶ- ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅನುಭವ ಪಡೆದುಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+