ಗೌರಿಬಿದನೂರಲ್ಲಿ ‘ಸಿಂಹಾದ್ರಿ’ ನೋಡಿದ ಪ್ರೇಕ್ಷಕರಿಗೆ ಬಾಡೂಟ
ಗೌರಿಬಿದನೂರಲ್ಲಿ ‘ಸಿಂಹಾದ್ರಿ’ ನೋಡಿದ ಪ್ರೇಕ್ಷಕರಿಗೆ ಬಾಡೂಟ
ತೆಲುಗು ಚಿತ್ರದ ಮೇಲಿನ ಪ್ರೀತಿಯ ವಿಚಿತ್ರ ಪರಿ...
ಸಾಮಾನ್ಯವಾಗಿ ತೆಲುಗಿನ ಸ್ಟಾರ್ ಮೌಲ್ಯ ಇರುವ ಚಿತ್ರಗಳು ಕರ್ನಾಟಕದ ಗಡಿ ಭಾಗದ ಊರುಗಳಲ್ಲೂ ಸದ್ದು ಮಾಡಿಕೊಂಡೇ ಬಿಡುಗಡೆಯಾಗುತ್ತವೆ. ಸಿಹಿ ಹಂಚುವುದು, ಕಟೌಟ್‌ಗೆ ಕುರಿ ಬಲಿ ಕೊಡುವುದು, ಭಾರೀ ಹೂವಿನ ಹಾರ ಹಾಕುವುದು ಮಾಮೂಲು. ಅದೂ ಕೋಲಾರ, ಗೌರಿಬಿದನೂರು, ಬಾಗೇಪಲ್ಲಿ ಮೊದಲಾದ ಕರ್ನಾಟಕದ ಗಡಿ ಊರುಗಳಲ್ಲಿ ತೆಲುಗು ಚಿತ್ರಗಳು ಕನ್ನಡ ಚಿತ್ರಗಳಿಗಿಂತಲೂ ಹೆಚ್ಚು ಸದ್ದು ಮಾಡುತ್ತವೆ. ಆದರೆ, ಈ ಸಲ ಗೌರಿಬಿದನೂರಿನ ಮಂದಿ ಎನ್‌ಟಿಆರ್ ಹೆಸರಲ್ಲಿ ಬಾಡೂಟ ತಿಂದು ತೇಗಿದರು.
ಚಿತ್ರದ ಶತ ದಿನೋತ್ಸವದ ದಿನ ಚಿತ್ರದ ಮೂರು ಪ್ರದರ್ಶನಕ್ಕೆ ಬಂದ ಜನರಿಗೆ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳ ಸಂಘ ಬಾಡೂಟ ಬಡಿಸಿತು. ರಾಜ್ಯೋತ್ಸವ ಹತ್ತಿರಾಗುತ್ತಿರುವುದರಿಂದ ಕೆಲವು ಕನ್ನಡ ಪರ ಸಂಘಟನೆಗಳು ಈ ಘಟನೆಯನ್ನು ವಿರೋಧಿಸಿದ್ದು, ನವೆಂಬರ್‌ನಲ್ಲಾದರೂ ಕನ್ನಡ ಮೊಳಗಿಸಿ ಅಂತ ಬೊಬ್ಬೆಯಿಡುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications