ಓ ಹೆಣ್ಣೇ, ಸಾಂಸ್ಕೃತಿಕ ಆರೋಗ್ಯ ಕಾಪಾಡು- ಕಂಬಾರರ ಕಳಕಳಿ
ಓ ಹೆಣ್ಣೇ, ಸಾಂಸ್ಕೃತಿಕ ಆರೋಗ್ಯ ಕಾಪಾಡು- ಕಂಬಾರರ ಕಳಕಳಿ
ವಿದ್ಯುನ್ಮಾನ ಮಾಧ್ಯಮಗಳ ಬಗ್ಗೆ ಹುಷಾರ್ ಹುಷಾರ್
ನಗರದ ಅಂಬೇಡ್ಕರ್ ಸಭಾಭವನದಲ್ಲಿ ಮಹಿಳಾ ವಿವಿ ಏರ್ಪಡಿಸಿದ್ದ ಪ್ರಥಮ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳೆ ಮತ್ತು ಮಾಧ್ಯಮ’ ವಿಷಯ ಕುರಿತು ಮಂಗಳವಾರ (ಅ. 21) ಕಂಬಾರರು ಮಾತಾಡುತ್ತಿದ್ದರು. ವಿದ್ಯುನ್ಮಾನ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಜಾಹೀರಾತುಗಳಲ್ಲಿ ಹೆಂಗಸರನ್ನು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ. ನಾಚಿಕೆ ಬಿಟ್ಟು ಧೈರ್ಯವಾಗಿ ಹೆಂಗಸರು ತಮ್ಮ ಪಾತ್ರ ಮತ್ತು ಜವಾಬ್ದಾರಿಯನ್ನು ಮರೆಯುವಂತಾಗಿದೆ ಎಂದರು.
ಸತ್ಯವನ್ನು ಸುಳ್ಳಾಗಿಸಿ, ಸುಳ್ಳನ್ನು ಸತ್ಯವಾಗಿಸಿ ತೋರಿಸುವ ಶಕ್ತಿ ಜಾಹೀರಾತಿಗಿದೆ. ಕೇಳಿದ್ದಕ್ಕಿಂತ ಕಂಡದ್ದೇ ಸತ್ಯ. ಹಾಗೆ ನಂಬಿಸುವ ಕೆಲಸವನ್ನು ವಿದ್ಯುನ್ಮಾನ ಮಾಧ್ಯಮಗಳು ಮಾಡುತ್ತಿವೆ. ಸಾಂಸ್ಕೃತಿಕ ಜಗತ್ತಿನ ಆರೋಗ್ಯ ಕಾಪಾಡುವ ಶಕ್ತಿ ಹೆಂಗಸಿಗಿದೆ. ಮೃಗೀಯ ಗುಣದ ಪುರುಷನನ್ನು ಪಳಗಿಸಿ ಸಂಸ್ಕಾರ ನೀಡುವ ಕೆಲಸವನ್ನು ಆಕೆ ಮಾಡಬೇಕು. ಅದು ಬಿಟ್ಟು ಹೆಂಗಸರೇ ಮನಸ್ಸನ್ನು ಕಹಿ ಮಾಡಿಕೊಂಡರೆ ಯಾವುದೇ ದೇಶ ಉದ್ಧಾರವಾಗುವುದಿಲ್ಲ ಎಂದು ಕಂಬಾರರು ಎಚ್ಚರಿಸಿದರು.
ಇವತ್ತು ಜಾಗತೀಕರಣ ಎಂದರೆ ಅಮೆರಿಕೀಕರಣ ಎಂಬಂತಾಗಿದೆ. ಈ ಧೋರಣೆಯಿಂದ ಅಮೆರಿಕದಲ್ಲಿ ಮಾತ್ರ ಸರ್ಕಾರ ಇರುತ್ತದೆ. ಮಿಕ್ಕೆಲ್ಲ ದೇಶಗಳು ನಗರಸಭೆಗಳಂತೆ ಕಾರ್ಯ ನಿರ್ವಹಿಸುವ ಆಪತ್ತು ಇದೆ ಎಂದು ಆತಂಕ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications