ಜೋರು ಮಳೆ, ಸಿಡಿಲಿಗೆ ಗದಗ ಹಾಗೂ ಕೋಟದಲ್ಲಿ 3 ಬಲಿ
ಜೋರು ಮಳೆ, ಸಿಡಿಲಿಗೆ ಗದಗ ಹಾಗೂ ಕೋಟದಲ್ಲಿ 3 ಬಲಿ
ಮಳೆಯ ಅಬ್ಬರ ಸಹಿಸುವುದೂ ಕಷ್ಟ ಕಷ್ಟ
ಗದಗ ಜಿಲ್ಲೆಯ ಅಡರಳ್ಳಿ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಇಬ್ಬರು ಹುಡುಗರು (ಹೆಸರು ಗೊತ್ತಾಗಿಲ್ಲ) ಸೋಮವಾರ ಸಂಜೆ ಜೋರು ಮಳೆ ಬಂದೊಡನೆ ನೀರು ಹರಿದು ಹೋಗಲು ಹಾಕಿರುವ ಬೃಹದಾಕಾರದ ಪೈಪಿನಲ್ಲಿ ಕೂತರು. ಪೈಪಿನೊಳಗೆ ನುಗ್ಗಿದ ನೀರು ಇಬ್ಬರನ್ನೂ ಕೊಚ್ಚಿಕೊಂಡು ಹೋಗಿದೆ.
ಉಡುಪಿ ಜಿಲ್ಲೆಯ ಕೋಟಾ ಬಳಿಯಲ್ಲಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ರೈತನೊಬ್ಬ ಬಡಿದ ಸಿಡಿಲಿನಿಂದ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications