ಜನತಾ ಪರಿವಾರದ ಜೊತೆ ಹೊಂದಾಣಿಕೆ ಇಲ್ಲ -ಮಲ್ಯ ಸ್ಪಷ್ಟನೆ

ಜನತಾ ಪರಿವಾರದ ಜೊತೆ ಹೊಂದಾಣಿಕೆ ಇಲ್ಲ -ಮಲ್ಯ ಸ್ಪಷ್ಟನೆ
‘ಹೆಗಡೆ ಆಶೀರ್ವಾದ ಇದೆ. ಆದರೆ, ಚುನಾವಣೆ ಗೆಲ್ಲೋಕೆ ಅದು ಸಾಲೋಲ್ಲ’

ಉಡುಪಿ : ಜನತಾ ಪರಿವಾರದ ಯಾವುದೇ ಪಕ್ಷದ ಜೊತೆ ತಮ್ಮ ಪಕ್ಷ ಸೇರಿಕೊಳ್ಳುವ ಪ್ರಶ್ನೆಯೇ ಇಲ್ಲ. ಬದಲಿಗೆ ಬೇರೆ ಪಕ್ಷಗಳು ಒಡಂಬಡಿಕೆಗೆ ಮುಂದಾದರೆ ತಮ್ಮ ತತ್ವಗಳನ್ನು ಬಿಡದೆ, ಒಡಂಬಡಿಕೆ ಬಗ್ಗೆ ಚಿಂತಿಸುತ್ತೇವೆ ಎಂದು ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ವಿಜಯ್‌ ಮಲ್ಯ ಹೇಳಿದ್ದಾರೆ.

ಮಂಗಳವಾರ (ಅ. 21) ತಮ್ಮ ತವರು ಜಿಲ್ಲೆ ಉಡುಪಿಯಲ್ಲಿ ಅವರು ಸುದ್ದಿಗಾರರ ಜೊತೆ ಮಾತಾಡುತ್ತಿದ್ದರು. ಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರ ಉಡುಪಿಯಿಂದಲೇ ಚುನಾವಣೆಗೆ ಸ್ಪರ್ಧಿಸುವುದಾಗಿ ಮಲ್ಯ ಹೇಳಿದರು.

ಮೂಲಭೂತ ಸೌಕರ್ಯಗಳನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಅದರ ಫಲವೇ ಪ್ರತಿಭಾ ಪಲಾಯನ. ದಕ್ಷಿಣ ಕನ್ನಡ ಜಿಲ್ಲೆಯ ಸಂಪನ್ಮೂಲಗಳನ್ನಂತೂ ಸರ್ಕಾರ ಯಾವತ್ತೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಅತ್ಯುತ್ತಮ ಶಿಕ್ಷಣ ಕೇಂದ್ರವಾದ ಮಣಿಪಾಲ್‌ ಇಲ್ಲಿದ್ದೂ ಪ್ರತಿಭಾ ಪಲಾಯನವನ್ನು ತಡೆಗಟ್ಟುವ ಯತ್ನವನ್ನೇ ಸರ್ಕಾರ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಶೀರ್ವಾದ ಜನತಾ ಪಕ್ಷದ ಮೇಲೆ ಇದೆ ಎಂದು ಅಖಿಲ ಭಾರತ ಪ್ರಗತಿಪರ ಜನತಾದಳ (ಎಐಪಿಜೆಡಿ) ದ ಅಧ್ಯಕ್ಷ ಎಸ್‌.ಆರ್‌.ಬೊಮ್ಮಾಯಿ ಆಡಿರುವ ಮಾತಿಗೆ ಮಲ್ಯ ಪ್ರತಿಕ್ರಿಯೆ ನೀಡಿದ್ದು ಹೀಗೆ- ರಾಮಕೃಷ್ಣ ಹೆಗಡೆ ಅವರು ನನ್ನ ತಂದೆಯ ಸಮಾನರು. ನಮ್ಮ ಕುಟುಂಬಕ್ಕೆ ಅವರು 20 ವರ್ಷಗಳಿಂದ ಪರಿಚಿತರು. ಅವರ ಆಶೀರ್ವಾದ ನನ್ನ ಮೇಲೆ ಇರಬಹುದು. ಚುನಾವಣೆ ಗೆಲ್ಲುವುದು ಕೇವಲ ಆಶೀರ್ವಾದಗಳಿಂದ ಸಾಧ್ಯವಿಲ್ಲ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+