ತಕ್ಷಣ ಆನ್‌ಲೈನ್ ಲಾಟರಿ ನಿಲ್ಲಿಸಿ: ಎಸ್ಸೆಂಗೆ ಬಂಗಾರಪ್ಪ ಒತ್ತಾಯ
ತಕ್ಷಣ ಆನ್‌ಲೈನ್ ಲಾಟರಿ ನಿಲ್ಲಿಸಿ: ಎಸ್ಸೆಂಗೆ ಬಂಗಾರಪ್ಪ ಒತ್ತಾಯ
ಕೃಷ್ಣ ಜನಸ್ಪಂದನ ಯಾತ್ರೆಯನ್ನು ಮೆಚ್ಚಿದ ಬಂಗಾರಪ್ಪ
ಚಿತ್ರದುರ್ಗ ಜಿಲ್ಲೆಯ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಬಂಗಾರಪ್ಪ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಭಾನುವಾರ (ಅ. 19) ಮಾತಾಡಿದರು. ಬರಗಾಲದಲ್ಲೂ ಆನ್‌ಲೈನ್ ಲಾಟರಿ ಲಕ್ಷಾಂತರ ರುಪಾಯಿ ಗಳಿಸುತ್ತಿವೆ. ಬಡಬಗ್ಗರು ಹಣದಾಸೆಯಿಂದ ಆನ್‌ಲೈನ್ ಲಾಟರಿ ಮೇಲೆ ಹಣ ಸುರಿಯುತ್ತಿದ್ದಾರೆ. ಈ ವಿಷಯವನ್ನು ಮನದಟ್ಟು ಮಾಡಿಕೊಳ್ಳಲು ಯಾವ ಸಮಿತಿಯನ್ನೂ ರಚಿಸುವ ಅಗತ್ಯವಿಲ್ಲ. ತಕ್ಷಣವೇ ಆನ್‌ಲೈನ್ ಲಾಟರಿಯನ್ನು ನಿಷೇಧಿಸಬೇಕು ಎಂದು ಬಂಗಾರಪ್ಪ ಆಗ್ರಹಿಸಿದರು.
ಚುನಾವಣಾ ನಾಯಕತ್ವದ ಬಗ್ಗೆ ವ್ಯಕ್ತಿಗಳು ತಮ್ಮ ಅಭಿಪ್ರಾಯ ಹೇಳಕೂಡದು. ಅದು ಹೈಕಮಾಂಡ್‌ನ ತೀರ್ಮಾನಕ್ಕೆ ಸಂಬಂಧಪಟ್ಟ ವಿಷಯ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಡೆಸಿದ ಜನಸ್ಪಂದನ ಕಾರ್ಯಕ್ರಮ ಶ್ಲಾಘನೀಯವಾದದ್ದು. ಜನರ ಸಮಸ್ಯೆ ತಿಳಿಯಲು ಅವರ ಮುಂದೆಯೇ ಹೋಗುವ ಇಂಥಾ ಕೆಲಸವನ್ನು ಮೆಚ್ಚಬೇಕು. ಇದನ್ನು ಚುನಾವಣಾ ಪ್ರಚಾರ ತಂತ್ರ ಎಂದು ವಿರೋಧ ಪಕ್ಷದವರು ಟೀಕೆ ತೆಗೆಯುತ್ತಿರುವುದು ಸರಿಯಲ್ಲ ಎಂದು ಪ್ರಶ್ನೆಯಾಂದಕ್ಕೆ ಬಂಗಾರಪ್ಪ ಉತ್ತರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications