Get Updates
Get notified of breaking news, exclusive insights, and must-see stories!

ಜನಸ್ಪಂದನ ‘ಜಾಕ್‌ಪಾಟ್‌’ : ನವೆಂಬರ್‌ಗೆ ಆನ್‌ಲೈನ್‌ ಕಡೇ ಆಟ

ಜನಸ್ಪಂದನ ‘ಜಾಕ್‌ಪಾಟ್‌’ : ನವೆಂಬರ್‌ಗೆ ಆನ್‌ಲೈನ್‌ ಕಡೇ ಆಟ
ರಿkುೕ ಸಮೂಹ ಸಂಸ್ಥೆ ಜೊತೆ ಒಪ್ಪಂದ ತೊಡೆದುಕೊಳ್ಳಲು ನಿರ್ಧಾರ

*ಪಿ.ತ್ಯಾಗರಾಜ್‌

ಬೆಂಗಳೂರು : ರಾಜ್ಯದಲ್ಲಿ ನವೆಂಬರ್‌ನಿಂದಲೇ ಆನ್‌ಲೈನ್‌ ಲಾಟರಿ ನಿಷೇಧಕ್ಕೆ ಮುಖ್ಯಮಂತ್ರಿ ಕೃಷ್ಣ ತೀರ್ಮಾನಿಸಿದ್ದಾರೆ.

ರಾಜ್ಯವನ್ನು ಕಾಡುತ್ತಿರುವ ಸತತ ಬರ, ಕೃಷಿ ಸಾಲದ ಜತೆಗೆ ಆನ್‌ಲೈನ್‌ ಲಾಟರಿ ಕೂಡ ರೈತರ ಆತ್ಮಹತ್ಯೆಗೆ ಕಾರಣ ಎಂಬ ಕೂಗಿನ ಹಿನ್ನೆಲೆಯಲ್ಲಿ ಕೃಷ್ಣ ಈ ನಿರ್ಧಾರಕ್ಕೆ ಬಂದಿದ್ದಾರೆ.

ರೈತರು ಕೃಷಿ ಸಾಲದ ಹೊರೆಯಿಂದ ಕಂಗೆಟ್ಟಿದ್ದಾರೆ. ಕೃಷಿಕರು ಸೇರಿದಂತೆ ಅನೇಕ ಜನ ಆನ್‌ಲೈನ್‌ ಲಾಟರಿ ಜೂಜಿನಿಂದ ಮನೆ- ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಕೂಲಂಕಷ ವರದಿ ತರಿಸಿಕೊಂಡಾಗ, ಆನ್‌ಲೈನ್‌ ಲಾಟರಿ ಚಟಕ್ಕೆ ಬಿದ್ದು ಕೆಲವರು ಸಾಲ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಆನ್‌ಲೈನ್‌ ಮಾರಾಟ ಸಂಬಂಧ ರಿkುೕ ಸಮೂಹ ಸಂಸ್ಥೆಯ ಆಲ್ಟ್ರಾ ಎಂಟರ್‌ಟೇನ್‌ಮೆಂಟ್‌ ಸಲ್ಯೂಷನ್ಸ್‌ ಹಾಗೂ ರಾಜ್ಯ ಸರಕಾರದ ನಡುವೆ ಕಳೆದ ವರ್ಷ ಆರಂಭದಲ್ಲಿ ಒಪ್ಪಂದ ಆಗಿದೆ. ಐದು ವರ್ಷ ಅವಧಿಯ ಈ ಒಪ್ಪಂದದ ಪ್ರಕಾರ ಅಲ್ಟ್ರಾ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಐದು ವರ್ಷದಲ್ಲಿ 1, 096 ಕೋಟಿ ರುಪಾಯಿ ಸಂದಾಯ ಮಾಡಬೇಕು. ಈವರೆಗೆ ನೂರು ಕೋಟಿ ರು.ಗೂ ಹೆಚ್ಚು ಆದಾಯ ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ.

ಬರ ಹಾಗೂ ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈಗ ಆನ್‌ಲೈನ್‌ ಲಾಟರಿ ನಿಷೇಧಕ್ಕೆ ತೀರ್ಮಾನಿಸಿರುವುದರಿಂದ ಅಲ್ಟ್ರಾ ಸಂಸ್ಥೆ ಜತೆಗಿನ ಒಪ್ಪಂದ ನವೆಂಬರ್‌ನಿಂದ ರದ್ದಾಗಲಿದೆ.

ಕಳೆದ ಅ. 8 ರಂದು ಹೊರವಲಯ ಅರಿಶಿನಕುಂಟೆಯಲ್ಲಿ ನಡೆದ ‘ಜನಸ್ಪಂದನ’ ಉದ್ಘಾಟನೆ ಸಮಾರಂಭದಲ್ಲಿ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಆನ್‌ಲೈನ್‌ ಲಾಟರಿ ನಿಷೇಧ ಕುರಿತು ಬರುವ ಬಜೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.

ಆದರೆ ಮರುದಿನ ಚಿತ್ರದುರ್ಗದಲ್ಲಿ ಜನಸ್ಪಂದನ ಕಾರ್ಯಕ್ರಮದ ವೇಳೆ ರೈತ ಸಂಘಟನೆಯವರು ಆನ್‌ಲೈನ್‌ ಲಾಟರಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು. ಇದು ಆನ್‌ಲೈನ್‌ ಬಗ್ಗೆ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ರೋಷವನ್ನು ಬಿಂಬಿಸಿತ್ತು. ಜನಸ್ಪಂದನ ಯಾತ್ರೆ ಸಂದರ್ಭದಲ್ಲಿ ಆನ್‌ಲೈನ್‌ ಲಾಟರಿ ಬೇಡ ಎಂಬ ಮನವಿಗಳು ಮುಖ್ಯಮಂತ್ರಿಯವರಿಗೆ ಬಂದಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನವೆಂಬರ್‌ನಿಂದ ಆನ್‌ಲೈನ್‌ ಲಾಟರಿ ನಿಷೇಧಕ್ಕೆ ಕೃಷ್ಣ ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ರಿkುೕ ಸಮೂಹ ಸಂಸ್ಥೆ ಅಧ್ಯಕ್ಷ ಸುಭಾಷ್‌ ಚಂದ್ರ ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ಅನಧಿಕೃತ ಲಾಟರಿ ನಿಯಂತ್ರಣಕ್ಕೆ ಒತ್ತಾಯಿಸಿದ್ದರು. ಆನ್‌ಲೈನ್‌ ಲಾಟರಿ ವಿರುದ್ಧ ಸಾರಾಯಿ ಮತ್ತು ಅನಧಿಕೃತ ಲಾಟರಿ ಲಾಬಿ ಕೆಲಸ ಮಾಡುತ್ತಿದೆ ಎಂದು ದೂರಿದ್ದರು. ಮುಂದಿನ ಬಜೆಟ್‌ವರೆಗೂ ಕಾಯಿಸದೆ ಆನ್‌ಲೈನ್‌ ಲಾಟರಿ ಬಗ್ಗೆ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದರು.

(ಸ್ನೇಹಸೇತು- ವಿಜಯ ಕರ್ನಾಟಕ)

Post your views

ಮುಖಪುಟ / ಕೃಷ್ಣಗಾರುಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+