ಅ.19ರಂದು ಹರಿಹರಪುರ ಸಚ್ಚಿದಾನಂದ ಸ್ವಾಮೀಜಿಗೆ ಗುರುವಂದನೆ
ಅ.19ರಂದು ಹರಿಹರಪುರ ಸಚ್ಚಿದಾನಂದ ಸ್ವಾಮೀಜಿಗೆ ಗುರುವಂದನೆ
ಸುಬ್ರಹ್ಮಣ್ಯ ದೇವಸ್ಥಾನದಿಂದ ಶಂಕರ ಮಠದವರೆಗೆ ಶ್ರೀಗಳ ಮೆರವಣಿಗೆ
ಶಂಕರಪುರದಲ್ಲಿರುವ ಶಂಕರ ಮಠದ ಶಾರದಾ ವಿಹಾರ ಸಭಾಂಗಣದಲ್ಲಿ ಮುಂಜಾನೆ 7 ಗಂಟೆಗೆ ಕಾರ್ಯಕ್ರಮ ಶುರುವಾಗಲಿದ್ದು, ಮಠದ ಶಿಷ್ಯರು ಸ್ವಾಮೀಜಿಗೆ ನಿಧಿ ಸಮರ್ಪಿಸಲಿದ್ದಾರೆ. ದಿನವಿಡೀ ಭರ್ತಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ ನಾಲ್ಕು ಗಂಟೆಗೆ ಶಂಕರಪುರಂನ ಸಜ್ಜನರಾವ್ ವೃತ್ತದ ಸುಬ್ರಹ್ಮಣ್ಯ ದೇವಸ್ಥಾನದಿಂದ ಶಂಕರ ಮಠದವರೆಗೆ ಸ್ವಾಮೀಜಿಯನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆ ತರಲಾಗುವುದು. ನಂತರ ಸ್ವಾಮೀಜಿ ಮಠದ ಸ್ವಯಂ ಸೇವಾ ಪರಿಷತ್ತಿನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಿದ್ದಾರೆ.
ಹರಿಹರಪುರವನ್ನು ದೇಶದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ಬೆಳೆಸಲು ಮಹತ್ವಾಕಾಂಕ್ಷೆಯ ಯೋಜನೆಯಾಂದನ್ನು ಸ್ವಾಮೀಜಿ ರೂಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications