ತಲಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ವಿಶೇಷ ಪ್ಯಾಕೇಜ್‌ ಟೂರ್‌

ತಲಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ವಿಶೇಷ ಪ್ಯಾಕೇಜ್‌ ಟೂರ್‌
ಅ. 18ರ ಬೆಳಗ್ಗೆ ತಲಕಾವೇರಿಯಲ್ಲಿ ತೀರ್ಥೋದ್ಭವ

ಬೆಂಗಳೂರು: ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್‌ 18ರಂದು ತೀರ್ಥೋದ್ಭವವಾಗಲಿದ್ದು , ತೀರ್ಥೋದ್ಭವ ವೀಕ್ಷಣೆಗೆ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

18ರ ಶನಿವಾರ ಬೆಳಗ್ಗೆ 7. 15ಕ್ಕೆ ಕಾವೇರಿ ನದಿ ಮೂಲ ಉಕ್ಕಿ ಹರಿಯಲಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ತೀರ್ಥೋದ್ಭವ ವೀಕ್ಷಣೆಗಾಗಿ ತಲಕಾವೇರಿ ಪ್ರವಾಸವನ್ನೇರ್ಪಡಿಸಿದೆ. ಈ ಪ್ಯಾಕೇಜ್‌ ಪ್ರವಾಸದಲ್ಲಿ ತಲಕಾವೇರಿಯಲ್ಲಿ ತೀರ್ಥೋದ್ಭವ ವೀಕ್ಷಣೆ, ನಂತರ ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ರಾಜಾ ಸೀಟ್‌, ನಿಸರ್ಗಧಾಮ, ಬೈಲುಕುಪ್ಪ ಗೋಲ್ಡನ್‌ ಟೆಂಪಲ್‌ ವೀಕ್ಷಣೆಯೂ ಸೇರಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯ ಎದುರಿನ ಬಾದಾಮಿ ಹೌಸ್‌ ಕಟ್ಟಡದ ಬಳಿಯಿಂದ ಅ. 17ರ ರಾತ್ರಿ 11 ಗಂಟೆಗೆ ಬಸ್‌ ಹೊರಟು, ಮರುದಿನ, ಅಂದರೆ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಬಸ್‌ ಮತ್ತೆ ಬೆಂಗಳೂರಿಗೆ ವಾಪಸ್ಸಾಗಲಿದೆ.

ಪ್ಯಾಕೇಜ್‌ ಟೂರಿನ ಶುಲ್ಕ ಒಬ್ಬ ವ್ಯಕ್ತಿ 725 ರೂಪಾಯಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಪರ್ಕ : 080-2275883/22755869.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+