ಚನ್ನಪಟ್ಟಣ ಬಳಿ ಅಪಘಾತ: ಸುತ್ತೂರು ಶ್ರೀಗಳಿಗೆ ಸಣ್ಣಪುಟ್ಟ ಗಾಯ
ಚನ್ನಪಟ್ಟಣ ಬಳಿ ಅಪಘಾತ: ಸುತ್ತೂರು ಶ್ರೀಗಳಿಗೆ ಸಣ್ಣಪುಟ್ಟ ಗಾಯ
ಸರಣಿ ಅಪಘಾತದಲ್ಲಿ ಅಪಾಯದಿಂದ ಪಾರಾದ ದೇಶಿಕೇಂದ್ರ ಸ್ವಾಮೀಜಿ
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪೈಲಟ್ ಕಾರು ಅಚಾನಕ್ಕಾಗಿ ಬ್ರೇಕ್ ಹಾಕಿದಾಗ, ಹಿಂದೆ ಬರುತ್ತಿದ್ದ ಶ್ರೀಗಳ ಕಾರು ಪೈಲಟ್ ಕಾರ್‌ಗೆ ಗುದ್ದಿ ಅಪಘಾತ ಸಂಭವಿಸಿದೆ. ಹಿಂದಿದ್ದ ಬೆಂಗಾವಲು ಕಾರು ಶ್ರೀಗಳ ಕಾರಿಗೆ ಹಿಂದಿನಿಂದ ಗುದ್ದಿ ಇನ್ನಷ್ಟು ಅನಾಹುತವಾಗಿದೆ. ಗುರುವಾರ (ಅ.16) ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು , ಶ್ರೀಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀಗಳು ಆರೋಗ್ಯದಿಂದ ಇದ್ದಾರೆ. ಅಪಘಾತದ ನಂತರವೂ ಅವರು ಬದಲಿ ವಾಹನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications