ಹಂಪಿಯಲ್ಲಿ ನ.15-16 ರಂದು ‘ಕನ್ನಡ ಸಂಸ್ಕೃತಿ ಪುನರುತ್ಥಾನ’
ಹಂಪಿಯಲ್ಲಿ ನ.15-16 ರಂದು ‘ಕನ್ನಡ ಸಂಸ್ಕೃತಿ ಪುನರುತ್ಥಾನ’
ಚಿಂತಕರ ಚಾವಡಿಯಲ್ಲಿ ನಾಡು ನುಡಿಗೆ ಸಂಬಂಧಿಸಿದ ವಿಷಯಗಳು
ನಾಡು ನುಡಿಗೆ ಸಂಬಂಧಿಸಿದಂತೆ ವಿವಿಧ ಚಿಂತನಗೋಷ್ಠಿಗಳು ನಡೆಯುವ ‘ಕನ್ನಡ ಸಂಸ್ಕೃತಿ ಪುನರುತ್ಥಾನ’ ಕಾರ್ಯಕ್ರಮದಲ್ಲಿ ನಾಡಿನ ಚಿಂತಕರು, ಗಣ್ಯರು, ಸಾಹಿತಿಗಳು ಭಾಗವಹಿಸುವರು ಎಂದು ಮಾಜಿ ಶಾಸಕ ಹಾಗೂ ಕನ್ನಡ ಚಳವಳಿಕಾರ ಕೆ.ಪ್ರಭಾಕರರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗ್ರಾಮೀಣ ಕೃಪಾಂಕ ನೌಕರರ ಸಮಸ್ಯೆ, ರಾಜ್ಯದ ನೆಲ ಜಲದ ಮೇಲೆ ಪರರಾಜ್ಯಗಳಿಂದ ನಡೆಯುತ್ತಿರುವ ಆಕ್ರಮಣ, ರೈತರ ಆತ್ಮಹತ್ಯೆ, ಯುವಜನತೆಯ ಸಮಸ್ಯೆಗಳು ಇತ್ಯಾದಿ ವಿಷಯಗಳ ಕುರಿತು ಚಿಂತಕರು ಬೆಳಕು ಚೆಲ್ಲಲಿದ್ದಾರೆ. ಸರೋಜಿನಿ ಮಹಿಷಿ ವರದಿಯ ಪ್ರಸ್ತುತತೆ ಹಾಗೂ ಕಾರ್ಖಾನೆಗಳ ಪುನಶ್ಚೇತನ ವಿಷಯಗಳು ಪ್ರಮುಖವಾಗಿ ಚರ್ಚೆಗೊಳಗಾಗಲಿವೆ ಎಂದು ಪ್ರಭಾಕರ ರೆಡ್ಡಿ ಹೇಳಿದರು.
ನಾಡಿನ ಪ್ರಮುಖ ಕನ್ನಡ ಸಂಘಟನೆಗಳು ಹಂಪಿಯಲ್ಲಿನ ‘ಕನ್ನಡ ಸಂಸ್ಕೃತಿ ಪುನರುತ್ಥಾನ’ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications