ಇನ್ನು ಮುಂದೆ ಸರ್ಕಾರಿ ಕಚೇರಿ ಫೈಲುಗಳು ಧೂಳು ಹಿಡಿಯುವುದಿಲ್ಲ !
ಇನ್ನು ಮುಂದೆ ಸರ್ಕಾರಿ ಕಚೇರಿ ಫೈಲುಗಳು ಧೂಳು ಹಿಡಿಯುವುದಿಲ್ಲ !
ನವೆಂಬರ್ ತಿಂಗಳಿಂದ 63 ಲಕ್ಷ ಕಡು ಬಡವರಿಗೆ ಪಡಿತರ ಧಾನ್ಯ ಪೂರೈಕೆ
ಸುದ್ದಿಗಾರರ ಜೊತೆ ಗುರುವಾರ (ಅ. 16) ಮಾತಾಡುತ್ತಿದ್ದ ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಸಚಿವ ಸಂಪುಟದಲ್ಲಿ ಕೈಗೊಂಡ ಈ ನಿರ್ಣಯವನ್ನು ತಿಳಿಸಿದರು. ಈ ವರ್ಷ ಜನವರಿಯಲ್ಲಿ ವಿಲೇವಾರಿಯಾಗದ ಒಂದು ವರ್ಷಕ್ಕೂ ಹೆಚ್ಚು ಹಳೆಯ 1.85 ಲಕ್ಷ ಕಡತಗಳು ವಿವಿಧ ಸರ್ಕಾರಿ ಇಲಾಖೆಗಳ ಮೇಜುಗಳ ಮೇಲೆ ಉಳಿದಿದ್ದವು. ಕಳೆದ ಆರೆಂಟು ತಿಂಗಳ ಅವಧಿಯಲ್ಲಿ ಸಾಕಷ್ಟು ಚುರುಕಾಗಿ ಕೆಲಸ ಮಾಡುವ ಮೂಲಕ ಈಗ ಕಡತಗಳ ಸಂಖ್ಯೆಯನ್ನು 55 ಸಾವಿರಕ್ಕೆ ಇಳಿಸಲಾಗಿದೆ. ಈ ವರ್ಷಾಂತ್ಯಕ್ಕೆ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಲು ಕೆಲಸ ನಿರತರಾಗುವಂತೆ ಅಧಿಕಾರಿಗಳಿಗೆ ಆದೇಶಿಸಲಾಗುವುದು. ಕನಿಷ್ಠ ಪಕ್ಷ ಕಡತಗಳ ಸಂಖ್ಯೆಯನ್ನು 10 ಸಾವಿರಕ್ಕಾದರೂ ಇಳಿಸುವುದು ಸರ್ಕಾರದ ಗುರಿ. ಇನ್ನು ಮುಂದೆ ಎಂತಹ ಕಡತವಾದರೂ 6 ತಿಂಗಳೊಳಗಾಗಿ ವಿಲೇವಾರಿ ಮಾಡಲಾಗುವುದು ಎಂದು ಅಲ್ಲಂ ಹೇಳಿದರು.
63 ಲಕ್ಷ ಕುಟುಂಬಗಳಿಗೆ ಹಳದಿ ಪಡಿತರ ಚೀಟಿ : ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಿಂಗಳಿಗೆ 28 ಕಿಲೋ ಅಕ್ಕಿ (ಪ್ರತಿ ಕಿಲೋಗೆ 6.15 ರುಪಾಯಿ ದರದಲ್ಲಿ) ಹಾಗೂ 7 ಕಿಲೋ ಗೋಧಿ (ಕಿಲೋಗೆ 4.65ರು. ದರದಲ್ಲಿ) ಕೊಡಲು 63 ಲಕ್ಷ ಹಳದಿ ಪಡಿತರ ಚೀಟಿಯನ್ನು ವಿತರಿಸಲಾಗುವುದು. ಆ ಮೂಲಕ ನವೆಂಬರ್ 1ರಿಂದ ಕಡು ಬಡವರ ಕುಟುಂಬಗಳಿಗೆ ಧಾನ್ಯ ಪೂರೈಸಬೇಕೆಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಅಲ್ಲಂ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications