ರಾಘವೇಶ್ವರ ಶ್ರೀಗಳಿಂದ ಅ.26ರಂದು ಗೋಗ್ರಾಸ ಕಾರ್ಯಕ್ರಮ
ರಾಘವೇಶ್ವರ ಶ್ರೀಗಳಿಂದ ಅ.26ರಂದು ಗೋಗ್ರಾಸ ಕಾರ್ಯಕ್ರಮ
ಮಠದ ವತಿಯಿಂದ ಹೊಸ ನಗರದಲ್ಲಿ ಗೋಮೂತ್ರ ಔಷಧ ತಯಾರಿಕಾ ಘಟಕ
26ರ ಬಲಿಪಾಡ್ಯಮಿಯ ದಿನದಂದು ಗೋರಕ್ಷಣೆಯ ಉದ್ದೇಶದಿಂದ ಗೋಗ್ರಾಸ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗುವುದು. ದೇಶೀಯ ಗೋವುಗಳ ತಳಿಯ ಅಭಿವೃದ್ಧಿಯಾಗಬೇಕು. ಅಲ್ಲದೆ ಈಗಾಗಲೇ ಕ್ಷೀಣಿಸುತ್ತಿರುವ ಕೆಲವು ದೇಶೀ ಗೋತಳಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಲಿಪಾಡ್ಯಮಿ ದಿನ ಗೋಗ್ರಾಸ ಹಾಗೂ ಪಾರಂಪರಿಕ ಗೋಪೂಜೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಸ್ವಾಮೀಜಿಯವರ ಪ್ರಕಟಣೆ ತಿಳಿಸಿದೆ.
ಗೊ-ಮೂತ್ರದಲ್ಲಿ ಹಲವಾರು ಔಷಧೀಯ ಗುಣಗಳಿವೆ. ಗೋಮೂತ್ರದಿಂದ 148 ಬಗೆಯ ರೋಗಗಳನ್ನು ಗುಣಪಡಿಸಲು ಸಾಧ್ಯವೆಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಹೊಸ ನಗರದ ಮೂಲ ಮಠದಲ್ಲಿ ಗೋಮೂತ್ರ ಔಷಧ ತಯಾರಿಕಾ ಘಟಕವನ್ನು ಮಠದ ವತಿಯಿಂದ ಸ್ಥಾಪಿಸಲಾಗುವುದು. ಕಾಸರಗೋಡಿನ ಮುಜುಂಗಾವು ಮತ್ತು ಪೆರ್ಲದಲ್ಲಿಯೂ ಇಂಥದ್ದೇ ಘಟಕಗಳು ಆರಂಭಗೊಳ್ಳಲಿದೆ ಎಂದು ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications