ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷರೀಫ್‌ ಮಾತು ಸರಿಯೆಂದ ಪೂಜಾರಿ ; ಕೃಷ್ಣ ನಾಯಕತ್ವಕ್ಕೆ ಹಿನ್ನಡೆ

By Staff
|
Google Oneindia Kannada News

ಷರೀಫ್‌ ಮಾತು ಸರಿಯೆಂದ ಪೂಜಾರಿ ; ಕೃಷ್ಣ ನಾಯಕತ್ವಕ್ಕೆ ಹಿನ್ನಡೆ
ಧರ್ಮಸಿಂಗ್‌ರದು ಭಾವೋದ್ವೇಗದ ಮಾತು, ನಾಯಕತ್ವದ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ...

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎನ್ನುವ ವಿಷಯವನ್ನು ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ದನ ಪೂಜಾರಿ ಹೇಳುವುದರೊಂದಿಗೆ, ಕಾಂಗ್ರೆಸ್‌ ಪಕ್ಷದೊಳಗಿನ ನಾಯಕತ್ವ ವಿವಾದ ಇನ್ನಷ್ಟು ರಾಡಿಯಾಗಿದೆ.

ಕಾಂಗ್ರೆಸ್‌ ಪಕ್ಷ ಏಕೈಕ ನಾಯಕರನ್ನು ಹೊಂದಿದೆ. ಅದು ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ. ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎನ್ನುವುದನ್ನು ಸೋನಿಯಾ ಅವರೇ ನಿರ್ಧರಿಸುತ್ತಾರೆ ಎಂದು ಜನಾರ್ದನ ಪೂಜಾರಿ ಮಂಗಳವಾರ ಸುದ್ದಿಗಾರಿಗೆ ತಿಳಿಸಿದರು.

ವಿಧಾನಸಭೆ ಚುನಾವಣೆಗಳನ್ನು ಮುಖ್ಯಮಂತ್ರಿ ಕೃಷ್ಣ ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ಎದುರಿಸುತ್ತದೆ ಎನ್ನುವ ಧರ್ಮಸಿಂಗ್‌ ಅವರ ಹೇಳಿಕೆಯನ್ನು ಸಂಸದ ಸಿ.ಕೆ.ಜಾಫರ್‌ ಷರೀಫ್‌ ತೀವ್ರವಾಗಿ ಟೀಕಿಸಿದ್ದರು. ಪಕ್ಷದ ನಾಯಕತ್ವವನ್ನು ಹೈ ಕಮಾಂಡ್‌ ನಿರ್ಧರಿಸುತ್ತದೆ ಎಂದು ಸೋಮವಾರ ಕಾರ್ಯಕ್ರಮವೊಂದರಲ್ಲಿ ಷರೀಫ್‌ ಹೇಳಿದ್ದರು. ಷರೀಫ್‌ ಅವರ ಹೇಳಿಕೆಯನ್ನು ಸಮರ್ಥಿಸಿದ ಜನಾರ್ದನ ಪೂಜಾರಿ, ಧರ್ಮಸಿಂಗ್‌ ಅವರ ಹೇಳಿಕೆಯನ್ನು ವೈಯಕ್ತಿಕ ಅಭಿಪ್ರಾಯ ಎಂದು ಬಣ್ಣಿಸಿದರು.

ಬಿಜಾಪುರದಲ್ಲಿನ ಜನ ಸ್ಪಂದನ ಕಾರ್ಯಕ್ರಮದಲ್ಲಿ ಕೃಷ್ಣ ಅವರ ನಾಯಕತ್ವದ ಕುರಿತು ಹೊರಬಿದ್ದ ಧರ್ಮಸಿಂಗ್‌ರ ಹೇಳಿಕೆ, ಹಾಗೂ ಆ ಹೇಳಿಕೆಗೆ ಕೃಷ್ಣ ಅವರ ಸಮ್ಮತಿಯ ಮಾತು ಭಾವೋದ್ವೇಗದಲ್ಲಿ ಹೊರಬಿದ್ದ ಹೇಳಿಕೆಗಳು. ಕಾಂಗ್ರೆಸ್‌ ಪಕ್ಷ ತನ್ನ ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಕೃಷ್ಣ ಅವರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳನ್ನು ಎದುರಿಸುತ್ತದೆ ಎಂದು ಪೂಜಾರಿ ಹೇಳಿದರು.

ಜಾಫರ್‌ ಷರೀಫ್‌ ಅವರನ್ನು ಶೀಘ್ರವೇ ಭೇಟಿ ಮಾಡಿ ಪಕ್ಷದ ವಿಷಯಗಳ ಕುರಿತು ಚರ್ಚಿಸುತ್ತೇನೆ ಎಂದ ಪೂಜಾರಿ, ಪಕ್ಷದಲ್ಲಿ ಯಾವುದೇ ಭಿನ್ನಮತ ಚಟುವಟಿಕೆ ನಡೆಯುತ್ತಿರುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದರು.

ಆನ್‌ಲೈನ್‌ ಲಾಟರಿಯನ್ನು ರದ್ದುಪಡಿಸಲು ಕೃಷ್ಣ ಅವರು ಚಿಂತಿಸುತ್ತಿರುವುದು ಸ್ವಾಗತಾರ್ಹ. ಆನ್‌ಲೈನ್‌ ಲಾಟರಿಗೆ ತಮ್ಮ ವಿರೋಧವೂ ಇದೆ ಎಂದು ಜನಾರ್ದನ ಪೂಜಾರಿ ತಿಳಿಸಿದರು. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಯಾಂದಕ್ಕೆ ಪೂಜಾರಿ ಉತ್ತರಿಸಿದರು.

(ಪಿಟಿಐ)

ವಾರ್ತಾ ಸಂಚಯ
ಎಸ್ಸೆಂ ಕೃಷ್ಣ ಮತ್ತು ಸಚಿವರ ವಿರುದ್ಧ ಜಾಫರ್‌ ಷರೀಫ್‌ ಮಾತುಕತ್ತಿ

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X