ಬುದ್ಧಂ ಶರಣಂ ಗಚ್ಛಾಮಿ: ನೂರಾರು ದಲಿತರು ಬೌದ್ಧ ಧಮ್ಮಕ್ಕೆ
ಬುದ್ಧಂ ಶರಣಂ ಗಚ್ಛಾಮಿ: ನೂರಾರು ದಲಿತರು ಬೌದ್ಧ ಧಮ್ಮಕ್ಕೆ
1956ರಲ್ಲಿ ಇದೇ ದಿನ ಅಂಬೇಡ್ಕರ್ ಬೌದ್ಧ ಧಮ್ಮೀಯರಾಗಿದ್ದರು
ಬೌದ್ಧ ‘ಧಮ್ಮ’ಕ್ಕೆ ಮತಾಂತರ ಹೊಂದಲು ಬಾಬಾಸಾಹೇಬ್ ಅಂಬೇಡ್ಕರ್ 1956ರಲ್ಲಿ ಸಿದ್ಧಪಡಿಸಿದ್ದ 22 ಅಂಶಗಳ ಪ್ರತಿಜ್ಞಾ ವಿಧಿಯನ್ನು ನೂರಾರು ದಲಿತರು ಮಂಗಳವಾರ ಪುನರುಚ್ಚರಿಸಿದರು. ಬೌದ್ಧ ಧಮ್ಮ ದೀಕ್ಷಾ ಸಮಿತಿ ಮತಾಂತರ ಸಮಾರಂಭವನ್ನು ಆಯೋಜಿಸಿತ್ತು. ಅಂತರರಾಷ್ಟ್ರೀಯ ಬೌದ್ಧ ಯುವ ಸಂಸ್ಥೆಗಳು ಹಾಗೂ ದಲಿತ ಸಂಘಟನೆಗಳು ಸಮಾರಂಭವನ್ನು ಬೆಂಬಲಿಸಿದ್ದವು.
ಹಿಂದೂ ಧರ್ಮವನ್ನು ನಾವು ತೊರೆಯುತ್ತೇವೆ. ಏಕೈಕ ನಿಜ ಧರ್ಮವಾದ ಬೌದ್ಧ ಧಮ್ಮವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಮತಾಂತರವಾದವರು ಘಂಟಾಘೋಷವಾಗಿ ಪ್ರತಿಜ್ಞೆ ಮಾಡಿದರು. ಸಂಘಟಕರು 50 ಸಾವಿರ ದಲಿತರನ್ನು ಮತಾಂತರಗೊಳಿಸುವ ಗುರಿ ಇಟ್ಟುಕೊಂಡಿದ್ದರು. ಆದರೆ ಈ ಗುರಿ ತೀರಾ ದೂರವಾಯಿತು. ಕೇವಲ ನೂರಾರು ದಲಿತರು ಮಾತ್ರ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.
1956ರ ಅಕ್ಟೋಬರ್ 14ನೇ ತಾರೀಕು ಅಂಬೇಡ್ಕರ್ ಬೌದ್ಧ ಧಮ್ಮಕ್ಕೆ ಮತಾಂತರ ಹೊಂದಿದ್ದರು. ಆ ದಿನದ ಸ್ಮರಣಾರ್ಥ ಮಂಗಳವಾರ ಮತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂದೂ ಧರ್ಮದ ಬಹು ಜಾತಿ ಪದ್ಧತಿಯಿಂದ ದಲಿತರು ನಿಕೃಷ್ಟರಾಗಿದ್ದಾರೆ. ಸಮಾಜದಲ್ಲಿ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಬೌದ್ಧ ಧರ್ಮಕ್ಕೆ ಸೇರುವುದರಿಂದ ಅವರ ಮನಸ್ಸಲ್ಲಿ ಜಾತೀಯತೆಯ ಕೊಂಕು ಅಳಿಸಿ ಹೋಗುತ್ತದೆ ಎಂದು ಕಾರ್ಯಕ್ರಮದ ಸಂಘಟಕರು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications