ಅಹಿಂಸಾ ವಾದದ ಮನೇಕಾ ಗಾಂಧಿಯೂ ರೇಶ್ಮೆ ಸೀರೆಯೂ

ಅಹಿಂಸಾ ವಾದದ ಮನೇಕಾ ಗಾಂಧಿಯೂ ರೇಶ್ಮೆ ಸೀರೆಯೂ
ಸಾಂಪ್ರದಾಯಿಕವಾಗಿ ತಯಾರಿಸಲಾದ ರೇಶ್ಮೆ ಬಟ್ಟೆಗಳನ್ನು ತ್ಯಜಿಸಲು ಕರೆ

ಅಹಿಂಸೆಯ ಬೆನ್ನು ಹತ್ತಿರುವ ಮನೇಕಾ ಗಾಂಧಿ ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ ಬಿಡುವಾಗ ಒಂದಿಷ್ಟು ಹೊತ್ತು ಹರಟೆಗೆ ಸಿಕ್ಕಿದರು. ಅದೂ ಇದೂ ಮಾತನಾಡುತ್ತಾ ಅಹಿಂಸಾ ಸಿಲ್ಕ್‌ ಎಂಬ ಹೊಸ ಯೋಜನೆಯ ಬಗ್ಗೆ ಮನೇಕಾ ಹೇಳತೊಡಗಿದರು.

ರೇಶ್ಮೆ ಹುಳುಗಳನ್ನು ಹಿಂಸಿಸಿ ತಯಾರಿಸುವ ರೇಶಿಮೆ ವಸ್ತ್ರಕ್ಕೆ ಹೆಂಗಸರು ಮುಗಿ ಬೀಳುವುದನ್ನು ಕಂಡು ಮನೇಕಾ ಅವರ ಮನಸ್ಸು ರೋಸಿದೆ. ಈ ಪರೋಕ್ಷ ಹಿಂಸೆಯನ್ನು ವಿರೋಧಿಸಿ ಮನೇಕಾ ಗಾಂಧಿ ಸದ್ಯದಲ್ಲಿಯೇ ಅಭಿಯಾನ ಶುರು ಮಾಡಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ನಾನು ರೇಶ್ಮೆ ಸೀರೆ ಉಟ್ಟಿಲ್ಲ. ರೇಶ್ಮೆಯ ಬಗ್ಗೆ ಜನರಲ್ಲಿ ಪವಿತ್ರ ಮನೋಭಾವವಿದೆ. ಅದನ್ನು ಬದಲಾಯಿಸಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ನನ್ನಿಂದ ಅದು ಸಾಧ್ಯವಾಗಲಿಲ್ಲ. ರೇಶ್ಮೆಯನ್ನು ತ್ಯಜಿಸಲು ಸಂಪ್ರದಾಯಸ್ಥ ಮನಸ್ಸುಗಳು ಒಪ್ಪುವುದಿಲ್ಲ ಎಂದು ಮನೇಕಾ ವಿಷಾದಿಸಿದರು.

ಇತ್ತೀಚಿತನ ತಂತ್ರಜ್ಞಾನದಿಂದಾಗಿ ರೇಶ್ಮೆ ಹುಳುಗಳನ್ನು ಹಿಂಸಿಸುವ ವಿಧಾನದಿಂದ ರೇಶ್ಮೆ ತಯಾರಿಸುವುದು ಅಗತ್ಯವೇನಲ್ಲ. ಬದಲಿ ರೇಶ್ಮೆ ತಯಾರಿಕಾ ವಿಧಾನಗಳು ಬಂದಿವೆ. ಆದ್ದರಿಂದ ಈಗಲಾದರೂ ಸಾಂಪ್ರದಾಯಿಕವಾಗಿ ತಯಾರಿಸಲಾದ ರೇಶ್ಮೆ ಬಟ್ಟೆಗಳನ್ನು ತ್ಯಜಿಸಬಹುದು ಎಂದು ಮನೇಕಾ ವಾದ ಮಂಡಿಸಿದರು.

ಅಂದಹಾಗೆ, ರೇಶ್ಮೆ ಸೀರೆಯನ್ನು ತ್ಯಜಿಸಿ ಪ್ರಾಣಿ ಪ್ರೀತಿಯನ್ನು ಮೆರೆಯುವ ಮನೇಕಾರ ಇತರ ಹವ್ಯಾಸಗಳೆಂದರೆ- ತೋಟಗಾರಿಕೆ, ಓದು ಮತ್ತು ವಾಕಿಂಗ್‌. ಶಾಪ್ಪಿಂಗ್‌ ಎಂದರೆ ಅವರಿಗೆ ಅಷ್ಟಕ್ಕಷ್ಟೇ. ಬೇರೆಯವರ ಬಳಿಯಿರುವ ವಸ್ತುಗಳನ್ನು ಕಂಡು ಖುಷಿ ಪಟ್ಟರೂ ಅಂತಹುದನ್ನೇ ತಾನು ಕೊಳ್ಳಬೇಕು ಅಂತ ಮನೇಕಾಗೆ ಅನಿಸುವುದಿಲ್ಲವಂತೆ. ನಾನು ತುಂಬಾ ಲಕ್ಕಿ. ಯಾಕೆಂದರೆ ನಾನು ಮಾಡುವ ಕೆಲಸವನ್ನು ನಾನು ತುಂಬಾ ಪ್ರೀತಿಸುತ್ತೇನೆ ಎನ್ನುವ ಮನೇಕಾ, ಕೊಳ್ಳುಬಾಕ ಸಂಸ್ಕೃತಿಯನ್ನು ವಿರೋಧಿಸುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+