‘ಮಿ.ಈರಣ್ಣ’ನಿಂದ ಅ.12ರಂದು ಆಧುನಿಕತೆಯ ಐಲುಪೈಲುಗೇಲಿ
‘ಮಿ.ಈರಣ್ಣ’ನಿಂದ ಅ.12ರಂದು ಆಧುನಿಕತೆಯ ಐಲುಪೈಲುಗೇಲಿ
ಆಕಾಶವಾಣಿ ಈರಣ್ಣ ನಾಟಕದಲ್ಲಿ ಪ್ರತ್ಯಕ್ಷರಾಗುವರು
ಬೆಂಗಳೂರು : ಚಿನ್ನದ ಹಬ್ಬದ ಅಂಗವಾಗಿ ‘ಚಿತ್ರಾ’ ಕಲಾವಿದರು ಪ್ರತಿ ತಿಂಗಳ ಎರಡನೇ ಭಾನುವಾರ ವಿಡಂಬನಾತ್ಮಕ ನಾಟಕಗಳ ಪ್ರದರ್ಶನ ಹಮ್ಮಿಕೊಂಡಿದ್ದು , ಅ.12ರ ಭಾನುವಾರ ‘ಮಿ.ಈರಣ್ಣ’ ಎನ್ನುವ ಹೊಸ ನಾಟಕವನ್ನು ಪ್ರದರ್ಶಿಸುವರು.
ಆಕಾಶವಾಣಿಯಲ್ಲಿ ಈರಣ್ಣ ಎನ್ನುವ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ರಂಗಕರ್ಮಿ ಹಾಗೂ ಪತ್ರಕರ್ತ ಎ.ಎಸ್.ಮೂರ್ತಿ ‘ಮಿ.ಈರಣ್ಣ’ ನಾಟಕದಲ್ಲಿ ಈರಣ್ಣನಾಗಿ ನಟಿಸುವರು. ಎ.ಎಸ್.ಮೂರ್ತಿ ಅವರೇ ಈ ನಾಟಕವನ್ನು ರಚಿಸಿದ್ದು , ಶಶಾಂಕ್, ಶ್ವೇತ, ಅನೂಪ್, ಗೌರಿದತ್ತು ಮುಂತಾದವರು ನಾಟಕದಲ್ಲಿ ಬಣ್ಣ ಹಚ್ಚುವರು.
ಆಧುನಿಕ ಜಗತ್ತಿನ ಐಲುಪೈಲುಗಳನ್ನು ‘ಮಿ.ಈರಣ್ಣ’ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಗೇಲಿಗೊಳಪಡಿಸುವ ಈ ನಾಟಕ ನಡೆಯುವ ಸ್ಥಳ : ಕಲಾಮಂದಿರ, ಹನುಮಂತನಗರ, ಬೆಂಗಳೂರು. ದೂರವಾಣಿ- 080-6621418. ಸಂಜೆ 7 ಗಂಟೆಗೆ ನಾಟಕ ಪ್ರಾರಂಭ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications