‘ಮಂದಿರ ನಿರ್ಮಾಣಕ್ಕೆ ಅನುಮತಿ ಕೊಡಿ ಇಲ್ಲವೆ ಕುರ್ಚಿ ಬಿಡಿ’
‘ಮಂದಿರ ನಿರ್ಮಾಣಕ್ಕೆ ಅನುಮತಿ ಕೊಡಿ ಇಲ್ಲವೆ ಕುರ್ಚಿ ಬಿಡಿ’
ಅ. 15ರಿಂದ ಮೂರು ದಿನಗಳ ಕಾಲ ಬೃಹತ್ ಹಿಂದೂ ಪ್ರತಿಭಟನಾ ರ್ಯಾಲಿ
ರಾಮಮಂದಿರ ವಿವಾದ ಕಳೆದ 13 ವರ್ಷಗಳಿಂದ ನಡೆಯುತ್ತಲೇ ಇದೆ. ಆದರೂ ಕೇಂದ್ರ ಸರಕಾರಕ್ಕೆ ವಿವಾದವನ್ನು ಬಗೆಹರಿಸುವುದು ಸಾಧ್ಯವಾಗಿಲ್ಲ. ಕೋರ್ಟ್ ಕೂಡ ಈ ಕುರಿತು ಸುಮ್ಮಾ ಸುಮ್ಮನೆ ವಿಳಂಬ ನೀತಿ ಅನುಸರಿಸುತ್ತಿದೆ. ಆದ್ದರಿಂದ ಅಕ್ಟೋಬರ್ 17ರಂದು ದೇಶಾದ್ಯಂತ ಹಿಂದೂಗಳು ಕೇಂದ್ರ ಸರ್ಕಾರ ಮತ್ತು ಕೋರ್ಟ್ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಲಿದ್ದಾರೆ ಎಂದು ಕಾಕಡೆ ಸುದ್ದಿಗಾರರಿಗೆ ತಿಳಿಸಿದರು.
ಅಕ್ಟೋಬರ್ 17ರಂದು ನಡೆಸುವ ಪ್ರತಿಭಟನೆಯ ಘೋಷವಾಕ್ಯ ‘ಮಂದಿರ ನಿರ್ಮಾಣಕ್ಕೆ ಅನುಮತಿ ಕೊಡಿ ಇಲ್ಲವಾದರೆ ಅಧಿಕಾರಿ ಬಿಡಿ’. ಪ್ರತಿಭಟನೆಗಾಗಿ ಮೂರು ದಿನ ಮುಂಚಿತವಾಗಿ, ಅಂದರೆ ಅಕ್ಟೋಬರ್ 15ರಿಂದಲೇ ವಿಹೆಚ್‌ಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅ. 15ರಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಈ ರ್ಯಾಲಿಯಲ್ಲಿ 7 ಲಕ್ಷ ಮಂದಿ ಹಿಂದೂಗಳು ಭಾಗವಹಿಸುವರು. ಅ. 16 ಮತ್ತು 17ರಂದು ಲಕ್ನೋ ಮತ್ತು ಗೌಹಾತಿಯಲ್ಲಿ ಪ್ರತಿಭಟನಾ ರ್ಯಾಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣದ ಬಗ್ಗೆ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ.
ವಿವಾದಿತ ಪ್ರದೇಶವನ್ನು ಹೊರತು ಪಡಿಸಿ ಉಳಿದ ಸ್ಥಳವನ್ನು ವಿಹೆಚ್‌ಪಿಗೆ ವಹಿಸಿಕೊಡುವಂತೆ 1994ರಲ್ಲಿ ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು. ಆದರೆ ಆ ಪ್ರದೇಶವನ್ನು ಸರಕಾರ ವಿಹೆಚ್‌ಪಿಗೆ ನೀಡಿರಲಿಲ್ಲ. ವಿವಾದಿತ ಸ್ಥಳದ ಕುರಿತು ಅಂತಿಮ ನಿರ್ಣಯವಾಗದ ಹೊರತು ಉಳಿದ ನೆಲವನ್ನು ವಿಹೆಚ್‌ಪಿಗೆ ವಹಿಸಿಕೊಡಲಾಗುವುದಿಲ್ಲ ಎಂದು ಕೇಂದ್ರ ಸರಕಾರ ಇತ್ತೀಚೆಗೆ ಹೇಳುತ್ತಿದೆ. ಅಂದರೆ ಕೇಂದ್ರ ಕೋರ್ಟ್‌ಗೂ ತಲೆಬಾಗುವುದಿಲ್ಲವೇ ಎಂದು ಪ್ರಶ್ನಿಸಿದ ಕಾಕಡೆ, ಎನ್‌ಡಿಎ ಬಣಕ್ಕೆ ತಕ್ಕಂತೆ ಬಿಜೆಪಿ ಸರಕಾರ ಕುಣಿಯುತ್ತಿದೆ ಎಂದು ದೂಷಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications