‘ವೀರಶೈವರೇ, ಹಿಂದೂ ವಿರಾಟ್ ಸಮಾವೇಶಕ್ಕೆ ಹೋಗಬೇಡಿ’
‘ವೀರಶೈವರೇ, ಹಿಂದೂ ವಿರಾಟ್ ಸಮಾವೇಶಕ್ಕೆ ಹೋಗಬೇಡಿ’
ವೀರಶೈವರ ಅನುಯಾಯಿಗಳಿಗೆ ಸಾಹಿತಿಗಳ ಬಹಿರಂಗ ಪತ್ರ
ಸಾಹಿತಿಗಳ ಹಾಗೂ ಕಲಾವಿದರ ಗುಂಪೊಂದು ವೀರಶೈವ ಮಠಾಧೀಶರಿಗೆ ಮತ್ತು ಪೀಠಾಧಿಪತಿಗಳಿಗೆ ಬಹಿರಂಗ ಪತ್ರ ಬರೆದಿದ್ದು , ಮನುಷ್ಯಪರ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಜನರಿಗೆ ಮಾರ್ಗದರ್ಶನ ನೀಡಬೇಕು ಎಂದು ವಿನಂತಿಸಿಕೊಂಡಿದೆ.
ಈ ಗುಂಪಿನಲ್ಲಿ ಸಾಹಿತಿಗಳಾದ ಶಾಂತರಸ, ಬಸವರಾಜ ಸಬರದ, ಎಡಪಂಥೀಯ ಚಿಂತಕ ಆರ್. ಕೆ. ಹಡಗಿ, ವೈದ್ಯ ಡಾ. ಪಿ. ಸಂಪತ್ ರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ, ನಿವೃತ್ತ ಪ್ರಾಚಾರ್ಯ ಎಸ್. ಜಿ. ಮೇಳಕುಂದಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ, ಮೀನಾಕ್ಷಿ ಬಾಳಿ ಮುಂತಾದವರಿದ್ದಾರೆ.
ಗುಲ್ಬರ್ಗ ತಾಲ್ಲೂಕಿನ ಫರತಾಬಾದದಲ್ಲಿ ಹಿಂದೂ ವಿರಾಟ ಸಮಾವೇಶದಲ್ಲಿ ಅನೇಕ ವೀರಶೈವ ಮಠಾಧೀಶರು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಹಿರಂಗ ಪತ್ರ ಬರೆಯಲಾಗಿದೆ.
ಸೋಗಲಾಡಿ ವಿರಾಟ ಹಿಂದೂ ಸಮಾವೇಶ ನಡೆಸಿ, ಕೊಳಕು ಹಿಂದೂ ಸಂಸ್ಕೃತಿ ವಿರುದ್ಧವೇ ಬಂಡೆದ್ದ ವೀರಶೈವರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಗೊಡ್ಡು ಪುರೋಹಿತರ ವೈದಿಕ ಧರ್ಮವು ವೀರಶೈವರನ್ನು ಬುಟ್ಟಿಗೆ ಹಾಕಿಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ಹಿಂದೂ ಸಮಾವೇಶವನ್ನು ಖಂಡಿಸಿ ಪತ್ರ ಬರೆಯಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications