ಕೃಷ್ಣಾನದಿಯಲ್ಲಿ ದೋಣಿ ಮುಳುಗಿ 16 ಸಾವು, 19 ಮಂದಿ ನಾಪತ್ತೆ
ಕೃಷ್ಣಾನದಿಯಲ್ಲಿ ದೋಣಿ ಮುಳುಗಿ 16 ಸಾವು, 19 ಮಂದಿ ನಾಪತ್ತೆ
ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ಜಲ ದುರಂತ
ಕೃಷ್ಣ ಜಿಲ್ಲೆಯ ಗೊಲ್ಲ ಮಂಡ ಮತ್ತು ಗುಲ್ಲಾಲ ಮೋದ ದ್ಪೀಪಗಳ ನಡುವೆ ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿದೆ. ಶಾಲಾ ಮಕ್ಕಳು ಸೇರಿದಂತೆ 50 ಮಂದಿಯನ್ನು ದೋಣಿ ಹೊತ್ತೊಯ್ದಿತ್ತು. 15 ಜನರು ಸುರಕ್ಷಿತವಾಗಿದ್ದು, 16 ಶವಗಳು ಸಿಕ್ಕಿವೆ. ಇನ್ನು 19 ಮಂದಿಗೆ ಹುಡುಕಾಟ ನಡೆದಿದೆ.
ಜಿಲ್ಲಾಧಿಕಾರಿ ಕೆ. ಪ್ರಭಾಕರ ರೆಡ್ಡಿ, ಪೊಲೀಸ್ ಸೂಪರಿಂಟೆಂಡೆಂಟ್ ಲಕ್ಷ್ಮಣ್ ಮೋಹನ್ ಮತ್ತಿತರ ಅಧಿಕಾರಿಗಳು ದುರಂತ ಸಂಭವಿಸಿರುವ ಜಾಗದಲ್ಲಿ ಜಮಾಯಿಸಿದ್ದು, ಕಾಣೆಯಾಗಿರುವವರ ತಲಾಷು ಕಾರ್ಯ ಚುರುಕುಗೊಳಿಸಿದ್ದಾರೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications