‘ಚರ್ಚು ಮಸೀದಿಯಲ್ಲೂ ಸಾಹಿತ್ಯ ಸಮ್ಮೇಳನ’
‘ಚರ್ಚು ಮಸೀದಿಯಲ್ಲೂ ಸಾಹಿತ್ಯ ಸಮ್ಮೇಳನ’
ಚರ್ಚು-ಮಸೀದಿಯಲ್ಲಿಯೂ ಸಮ್ಮೇಳನ ನಡೆಸಲು ಅಭ್ಯಂತರವಿಲ್ಲ ಎಂದು ಉತ್ತರ ನೀಡುವ ಮೂಲಕ ತಾವು ಜಾತಿವಾದಿ ಎನ್ನುವ ಆರೋಪಕ್ಕೆ ಹರಿಕೃಷ್ಣ ಪುನರೂರು ಉತ್ತರ ನೀಡಿದ್ದಾರೆ
ಚರ್ಚು ಅಥವಾ ಮಸೀದಿಯ ಆಡಳಿತ ಮಂಡಳಿಯವರು ಸ್ವಇಚ್ಛೆಯಿಂದ ಸಾಹಿತ್ಯ ಸಮ್ಮೇಳನ ನಡೆಸುವಂತೆ ಆಹ್ವಾನ ನೀಡಿದರೆ ಸಮ್ಮೇಳನ ನಡೆಸಲು ತಮ್ಮದೇನೂ ಅಭ್ಯಂತರ ಇರುವುದಿಲ್ಲ ಎಂದು ಪುನರೂರು ಹೇಳಿದರು. ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಭಾನುವಾರ ನಡೆದ ವಿಟ್ಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುನರೂರು ಮಾತನಾಡುತ್ತಿದ್ದರು.
ದೇವಸ್ಥಾನದ ಆವರಣಗಳಲ್ಲಿ ಸಾಕಷ್ಟು ಜಾಗ ಇರುವುದರಿಂದ ಹಾಗೂ ಸಮ್ಮೇಳನಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಅನುಕೂಲಗಳಿರುವುದರಿಂದ ಸಮ್ಮೇಳನಗಳನ್ನು ಅಲ್ಲಿ ಮಾಡುವ ಬಗ್ಗೆ ಒಲವು ಸಹಜ. ಅದರ ಹಿಂದೆ ಯಾವುದೇ ಜಾತಿಯ ಕಾರಣಗಳಿಲ್ಲ. ಚರ್ಚು ಅಥವಾ ಮಸೀದಿಯಲ್ಲಿಯೂ ಸಮ್ಮೇಳನ ನಡೆಸಲು ತಮ್ಮದೇನೂ ಅಭ್ಯಂತರವಿಲ್ಲ ಎಂದು ಪುನರೂರು ಸ್ಪಷ್ಟಪಡಿಸಿದರು.
ವಿಟ್ಲ ಸಾಹಿತ್ಯ ಸಮ್ಮೇಳನದಲ್ಲಿ ದಿ. ನೀರ್ಪಾಜೆ ಭೀಮ ಭಟ್ಟರ ‘ನಾಮದ ಫಲ’ ಎಂಬ ವಿಡಂಬನ ಕೃತಿ ಹಾಗೂ ಸುಬ್ರಹ್ಮಣ್ಯ ಒಡಿಯೂರು ಅವರ ನಾಟಕ ‘ಗುರುಪೂಜೆ’ಯನ್ನು ಹರಿಕೃಷ್ಣ ಪುನರೂರು ಬಿಡುಗಡೆ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications