ಜೈನಕೇಂದ್ರ ಮೂಡಬಿದಿರೆಯ ಸಾಹಿತ್ಯಸಮ್ಮೇಳನಕ್ಕೆ ಭೂಮಿಪೂಜೆ
ಜೈನಕೇಂದ್ರ ಮೂಡಬಿದಿರೆಯ ಸಾಹಿತ್ಯಸಮ್ಮೇಳನಕ್ಕೆ ಭೂಮಿಪೂಜೆ
ದಸರೆಗೆ ಸಾಹಿತ್ಯ ಪರಿಷತ್ತನ್ನು ಆಮಂತ್ರಿಸದ ಸರ್ಕಾರ, ಪುನರೂರು ಬೇಜಾರು
ಅಲಂಗಾರು ಬಡಗು ಮಹಲಿಂಗೇಶ್ವರ ದೇವಸ್ಥಾನದ ಮುಖ್ಯ ಅರ್ಚಕರಾದ ಈಶ್ವರ ಭಟ್ ಭೂಮಿ ಪೂಜೆ ಕಾರ್ಯಕ್ರವನ್ನು ನಡೆಸಿಕೊಟ್ಟರು. ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದಸರೆಗೆ ಆಹ್ವಾನವಿಲ್ಲ , ಪುನರೂರು ಬೇಸರ
ನಾಡಹಬ್ಬ ದಸರಾ ಉತ್ಸವಕ್ಕೆ ಕನ್ನಡ ಸಾಹಿತ್ಯ ಪರಿಷತ್‌ಗೆ ಆಮಂತ್ರಣ ನೀಡದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು ಆಕ್ಷೇಪಿಸಿದ್ದಾರೆ.
ನಾಡಿನ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್‌ಗೆ ಆಹ್ವಾನ ನೀಡದಿರುವ ಮೂಲಕ ರಾಜ್ಯ ಸರ್ಕಾರ ಪರಿಷತ್ತನ್ನು ಕಡೆಗಣಿಸಿದೆ. ಸಚಿವ ವಿಶ್ವನಾಥ್ ಅವರಿಗೆ ಪರಿಷತ್ ಕಾಣಿಸದಿರುವುದು ದುರದೃಷ್ಟಕರ ಎಂದು ವಿಟ್ಲ ಹೋಬಳಿ ಪ್ರಥಮ ಕಸಾಪ ಸಾಹಿತ್ಯ ಸಮ್ಮೇಳನ (ಭಾನುವಾರ, ಅ.5) ಉದ್ಘಾಟಿಸಿ ಮಾತನಾಡಿದ ಪುನರೂರು ವಿಷಾದ ವ್ಯಕ್ತಪಡಿಸಿದರು.
ಸಾಹಿತ್ಯ ಪರಿಷತ್ತಿನಲ್ಲಿ ಜಾತಿ ಹಾಗೂ ಧರ್ಮಗಳಿಗೆ ಮಣೆ ಹಾಕಲಾಗುತ್ತಿದೆ ಎನ್ನುವ ಕೆಲವರ ಟೀಕೆಯನ್ನು ಪುನರೂರು ಸ್ಪಷ್ಟವಾಗಿ ತಳ್ಳಿಹಾಕಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications