ಕುಂದಗೋಳ, ಶಿರೂರಲ್ಲಿ ಸಿಡಿಲುಯುಕ್ತ ಮಳೆಗೆ ಮೂರು ಸಾವು
ಕುಂದಗೋಳ, ಶಿರೂರಲ್ಲಿ ಸಿಡಿಲುಯುಕ್ತ ಮಳೆಗೆ ಮೂರು ಸಾವು
ಸಾಕಷ್ಟು ಮೆಣಸಿನಕಾಯಿ ಮತ್ತು ಶೇಂಗಾ ಬೆಳೆ ನಾಶ
ಮಧ್ಯಾಹ್ನ 3 ಗಂಟೆಯಿಂದಲೇ ಗುಡುಗು- ಮಿಂಚಿನ ಆರ್ಭಟ ಶುರುವಾಯಿತು. ರೊಟ್ಟಿಗವಾಡ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನೀಲವ್ವ ಭೀಮಪ್ಪ ಕಿತ್ತೂರ (30) ಮತ್ತು ಮಲ್ಲವ್ವ ಚನ್ನಪ್ಪ ವೇಗುಡಿ (32) ಎಂಬಿಬ್ಬರು ಮಹಿಳೆಯರು ಸ್ಥಳದಲ್ಲೇ ಮೃತ ಪಟ್ಟರು. ನಾಲ್ಕೈದು ಜನ ಗಾಯಗೊಂಡರು.
ಕುಂದಗೋಳದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಶಿರೂರ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ ದೇವಪ್ಪ ರೇವಡನ್ನವರ ಎಂಬ ಯುವಕ ಕೂಡ ಸಿಡಿಲು ಬಡಿತದಿಂದ ಸಾವಪ್ಪಿದ. ಸಂಜೆ 6.30 ಗಂಟೆಯವರೆಗೆ ಧೋ ಎಂದು ಸುರಿದ ಮಳೆಗೆ ಹಳ್ಳಿಗಳ ಕೆರೆ- ಕಟ್ಟೆಗಳು ಭರ್ತಿಯಾಗಿ, ಕೋಡಿ ಬಿದ್ದಿವೆ. ಮಳೆಯ ಆರ್ಭಟದಿಂದ ಸಾಕಷ್ಟು ಮೆಣಸಿನ ಕಾಯಿ ಮತ್ತು ಶೇಂಗಾ ಬೆಳೆ ನಾಶವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications