‘ವಿಲೀನದ ಅಡ್ಡಬಂಡೆ ದೇವೇಗೌಡರದ್ದು ಒಡೆದು ಆಳುವ ನೀತಿ’
‘ವಿಲೀನದ ಅಡ್ಡಬಂಡೆ ದೇವೇಗೌಡರದ್ದು ಒಡೆದು ಆಳುವ ನೀತಿ’
ಜಾತ್ಯತೀತ ಜನತಾದಳಕ್ಕೆ ನಾಗೇಗೌಡರ ಧಿಕ್ಕಾರ
ಸೋಮವಾರ (ಅ. 06) ಸುದ್ದಿಗಾರರ ಜೊತೆ ಮಾತಾಡುತ್ತಿದ್ದ ನಾಗೇಗೌಡ, ದಳಗಳ ವಿಲೀನಕ್ಕೆ ಅಡ್ಡಬಂಡೆಯಾಗಿರುವ ಏಕೈಕ ವ್ಯಕ್ತಿ ದೇವೇಗೌಡ. ಆತ ಒಗ್ಗಟ್ಟು ಮೂಡಿಸುವ ಕೆಲಸಕ್ಕೆ ಕಲ್ಲು ಹಾಕುತ್ತಿರುವುದರ ಜೊತೆಗೆ ಪಕ್ಷವನ್ನು ಒಡೆಯುವ ಯತ್ನವನ್ನೂ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಎಂ.ಪಿ.ಪ್ರಕಾಶ್ ಜಾತ್ಯತೀತ ಜನತಾ ದಳ ಸೇರುವ ವಿಷಯವನ್ನು ಘೋಷಿಸಿ, ತಮ್ಮೊಂದಿಗೆ ಇನ್ನೂ ಎಂಟರಿಂದ 10 ಶಾಸಕರು ಪಕ್ಷಾಂತರವಾಗುತ್ತಾರೆ ಎಂದಿದ್ದರು. ಆದರೆ ನಮ್ಮ ಪಕ್ಷ ಬಿಟ್ಟಿರುವುದು ಕೇವಲ ಮೂರು ಶಾಸಕರರಷ್ಟೆ. ಅಖಿಲ ಭಾರತ ಪ್ರಗತಿಪರ ಜನತಾ ದಳದ ಬಿರುಕುಗಳನ್ನು ಸರಿ ಪಡಿಸುವ ಕೆಲಸ ನಡೆದಿದೆ. ಜಾತ್ಯತೀತ ಜನತಾ ದಳಕ್ಕೆ ನಾವು ಶರಣಾಗಬೇಕು ಎಂಬ ಕನಸಿದೆ. ಅದಕ್ಕೆ ಸುತಾರಾಂ ಸೊಪ್ಪು ಹಾಕುತ್ತಿಲ್ಲ. ಹಾಗಿದ್ದೂ ಜಾತ್ಯತೀತ ಜನತಾದಳ ಪಕ್ಷ ಒಡೆಯುವ ಹುನ್ನಾರ ಬಿಟ್ಟಿಲ್ಲ ಎಂದು ನಾಗೇಗೌಡ ಜರೆದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications