ಭದ್ರಾ ಕಾಲುವೆಯ ರೈತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ಭದ್ರಾ ಕಾಲುವೆಯ ರೈತರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ
ಒಣಗುತ್ತಿರುವ ಬೆಳೆಗೆ ನೀರು ಕೊಡದ ಸರಕಾರಕ್ಕೆ ಧಮಕಿ

ಬೆಂಗಳೂರು : ಭದ್ರಾ ಜಲಾಶಯದಿಂದ ತಮ್ಮ ಬೆಳೆಗೆ ಸಾಕಷ್ಟು ನೀರು ಬಿಡುತ್ತಿಲ್ಲ ಎಂದು ಆಪಾದಿಸಿ ಭದ್ರಾ ಜಲಾನಯನ ಪ್ರದೇಶದ ರೈತರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರಕಾರಕ್ಕೆ ಬೆದರಿಕೆ ಒಡ್ಡಿದ್ದಾರೆ.

ಭದ್ರಾ ಜಲಾನಯನ ಪ್ರದೇಶದಲ್ಲಿರುವ ಅಕ್ರಮ ಪಂಪ್‌ ಸೆಟ್‌ಗಳನ್ನು ಕಿತ್ತು ಹಾಕಬೇಕು. ಒಣಗಿ ಹೋಗುತ್ತಿರುವ ತಮ್ಮ ಬೆಳೆಗೆ ಸಾಕಷ್ಟು ನೀರು ಪೂರೈಸಬೇಕು ಎಂದು ರೈತರು ಸರಕಾರವನ್ನು ಆಗ್ರಹಿಸಿದ್ದಾರೆ. ಸೆ. 10ರಂದು ಭದ್ರಾ ಜಲಾನಯನ ಪ್ರದೇಶದ ರೈತರ ಬೆಳೆಗೆ ನೀರು ಬಿಡಲಾಗಿದ್ದರೂ ಆ ನೀರು ಹೊಲ-ಗದ್ದೆಯನ್ನು ತಲುಪಿಲ್ಲ. ಬಿಟ್ಟಿರುವ ನೀರಿನಲ್ಲಿ ಬಹುಪಾಲು ಕುಂದವಾಡ ಕೆರೆಗೆ ಹರಿದಿದೆ.

ಭದ್ರಾ ಕಾಲುವೆಯ ಅಂತ್ಯದಲ್ಲಿರುವ ರೈತರು ನೀರಿಲ್ಲದೆ ತೀರ ಸಂಕಷ್ಟದಿಂದ ಬಳಲುತ್ತಿದ್ದಾರೆ. ದಾವಣಗೆರೆ ಪ್ರದೇಶದ ಸುಮಾರು 40 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗುತ್ತಿದೆ. ಚೆನ್ನಗಿರಿ, ಹರಿಹರ, ಹರಪ್ಪನ ಹಳ್ಳಿಯಲ್ಲಿ ಬೆಳೆಗಳು ಒಣಗುತ್ತಿವೆ. ಸದ್ಯದಲ್ಲೇ ಬೆಳೆಯನ್ನು ಉಳಿಸಿಕೊಳ್ಳಲು ಅನುಕೂಲ ಮಾಡಿಕೊಡದೇ ಇದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಲುವುದಾಗಿ ರೈತರು ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+