ಆಯುಧಪೂಜೆ ದಿನ ಪ್ರಾಣಿ ಬಲಿ ಬೇಡ -ಡಿಜಿಪಿ ಮಡಿಯಾಳ್
ಆಯುಧಪೂಜೆ ದಿನ ಪ್ರಾಣಿ ಬಲಿ ಬೇಡ -ಡಿಜಿಪಿ ಮಡಿಯಾಳ್
ಪ್ರಾಣಿ ಬಲಿ ತಡೆಯುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ
ಸಂಪ್ರದಾಯದ ನೆಪದಲ್ಲಿ ಹಲವು ವರ್ಷಗಳಿಂದ ಆಯುಧ ಪೂಜೆಯಂದು ವಾಹನಗಳಿಗೆ ಕುರಿ ಕೋಳಿ ಮುಂತಾದ ಪ್ರಾಣಿಗಳನ್ನು ಬಲಿ ಕೊಡುವುದು ವಾಡಿಕೆಯಲ್ಲಿದೆ. ಪೊಲೀಸ್ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳಲ್ಲಿಯೂ ಈ ಬಲಿ ಪದ್ಧತಿ ನಡೆಯುತ್ತದೆ. ಆದರೆ ಈ ಕಾನೂನು ಬಾಹಿರ ಪದ್ಧತಿಯನ್ನು ತಪ್ಪಿಸಲು ರಾಜ್ಯ ಪೊಲೀಸರು ಪ್ರಯತ್ನಿಸಬೇಕು ಎಂದು ಮಡಿಯಾಳ್ ಕರೆ ನೀಡಿದ್ದಾರೆ.
ಪ್ರಾಣಿಗಳನ್ನು ಬಲಿ ಕೊಡುವುದು, ಹಾಗೂ ಬಲಿಗಾಗಿ ಪ್ರಾಣಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ 6 ತಿಂಗಳ ಸಜೆ ಹಾಗೂ 1 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಬಲಿ ಕೊಡುವ ಬದಲಾಗಿ ಸಾತ್ವಿಕ ಪದಾರ್ಥ ಬಳಸಿ ಸಂಪ್ರದಾಯಗಳನ್ನು ಆಚರಿಸಬೇಕು ಎಂದು ಮಡಿಯಾಳ್ ಸಲಹೆ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications