Get Updates
Get notified of breaking news, exclusive insights, and must-see stories!

ರೈತರ ಸಾವಿಗೆ ಆನ್‌ಲೈನ್‌ ಲಾಟರಿ, ಕುಡಿತವೇ ಕಾರಣ-ಷರೀಫ್‌

ರೈತರ ಸಾವಿಗೆ ಆನ್‌ಲೈನ್‌ ಲಾಟರಿ, ಕುಡಿತವೇ ಕಾರಣ-ಷರೀಫ್‌
ಕೃಷ್ಣ ಸರ್ಕಾರದ ವಿರುದ್ಧ ಜಾಫರ್‌ ಷರೀಫ್‌ ಸುದರ್ಶನ ಚಕ್ರ

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳಿಗೆ ಆನ್‌ಲೈನ್‌ ಲಾಟರಿ ಹಾಗೂ ಕುಡಿತವೇ ಪ್ರಮುಖ ಕಾರಣ ಎಂದು ಸಂಸದ ಸಿ.ಕೆ.ಜಾಫರ್‌ ಷರೀಫ್‌ ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಡೆ ಆನ್‌ಲೈನ್‌ ಲಾಟರಿ ಆಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಡಿತದ ಅಂಗಡಿಗಳನ್ನು ತೆರೆಯಲಾಗುತ್ತದೆ. ಇದರಿಂದ ರೈತ ಆತ್ಮಹತ್ಯೆ ಮಾಡಿಕೊಂಡರೆ, ಆತ್ಮಹತ್ಯೆಗೆ ಬೇರೆ ಬೇರೆ ಕಾರಣಗಳನ್ನು ಹುಡುಕಲಾಗುತ್ತದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸರ್ಕಾರವನ್ನು ಜಾಫರ್‌ ಷರೀಫ್‌ ತೀವ್ರ ತರಾಟೆಗೆ ತೆಗೆದುಕೊಂಡರು. ಕರ್ನಾಟಕ ಪಶು ವೈದ್ಯ ಪರಿಷತ್ತಿನ ಕಟ್ಟಡದ ಪ್ರಾರಂಭೋತ್ಸವ ಸಮಾರಂಭದಲ್ಲಿ (ಮಂಗಳವಾರ, ಸೆ.30) ಅವರು ಮಾತನಾಡುತ್ತಿದ್ದರು.

ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಸೀಟುಗಳನ್ನು ಹಂಚುವುದೇ ಸರ್ಕಾರದ ಕೆಲಸವಾಗಿದೆ. ಇದರಿಂದಾಗಿ ಜನಸಂಖ್ಯೆ ನಿಯಂತ್ರಣದ ಪ್ರಚಾರ ಕಡಿಮೆಯಾಗಿದೆ ಎಂದು ಷರೀಫ್‌ ವಿಷಾದಿಸಿದರು.

ಮೂರು ವರ್ಷದಿಂದ ಕಾಡುತ್ತಿರುವ ತೀವ್ರ ಬರದಿಂದಾಗಿ ರೈತರು ಪಡಬಾರದ ಕಷ್ಟಪಡುತ್ತಿದ್ದಾರೆ. ಈ ಕಷ್ಟಗಳನ್ನು ಮರೆಯಲು ಆನ್‌ಲೈನ್‌ ಲಾಟರಿಯ ನಶೆ ಹಾಗೂ ಸಾರಾಯಿಯ ಅಮಲನ್ನು ಸರ್ಕಾರ ಒದಗಿಸಿಕೊಟ್ಟಿದೆ ಎಂದು ಷರೀಫ್‌ ಮಾರ್ಮಿಕವಾಗಿ ನುಡಿದರು. ಎಸ್ಸೆಂ.ಕೃಷ್ಣ ಅವರ ತೀವ್ರ ಟೀಕಾಕಾರರೆಂದು ಹೆಸರಾದ ಜಾಫರ್‌ ಷರೀಫ್‌ ಕೆಂಡದುಂಡೆಗಳನ್ನು ಉದುರಿಸುತ್ತಿದ್ದರೆ, ಪಶು ಸಂಗೋಪನೆ ಮತ್ತು ಸಕ್ಕರೆ ಖಾತೆ ಸಚಿವ ಎಂ.ಮಹಾದೇವ್‌ ಮೌನದಿಂದ ಕೂತಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+